*ಸಿದ್ದಾಪುರ, ನ. ೨೮: ನೆಲ್ಲಿಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಅತ್ತಿಮಂಗಲದಿAದ ನಲ್ವತ್ತೆಕ್ಕರೆವರೆಗಿನ ಜಿ.ಪಂ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.

ಅತ್ತಿಮಂಗಲದಿAದ ನಲ್ವತ್ತೆಕ್ಕರೆವರೆಗಿನ ರಸ್ತೆ ತುಂಬಾ ಹೊಂಡ ಗುಂಡಿಗಳಾಗಿದ್ದು, ಹರಡಿರುವ ಕಲ್ಲುಗಳು ಅಪಾಯವನ್ನು ಆಹ್ವಾನಿಸುತ್ತಿದೆ. ದ್ವಿಚಕ್ರ ವಾಹನ ಚಾಲನೆ ಅಸಾಧ್ಯವಾಗಿದೆ, ಆಟೋರಿಕ್ಷಾಗಳು ಗ್ರಾಹಕರು ಕರೆದರೂ ಈ ಮಾರ್ಗದಲ್ಲಿ ಬರಲು ಒಪ್ಪುತ್ತಿಲ್ಲ. ವಾಹನಗಳಿಗೆ ಸಾಕಷ್ಟು ಹಾನಿ ಯಾಗುತ್ತಿದ್ದು, ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ.

೧೯೯೪ ರಲ್ಲಿ ಡಾಂಬರು ಕಂಡ ರಸ್ತೆ ನಂತರದ ವರ್ಷಗಳಲ್ಲಿ ದುರಸ್ತಿ ಭಾಗ್ಯವನ್ನೇ ಕಂಡಿಲ್ಲವೆAದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಜಿ.ಪಂ ರಸ್ತೆ ಯಾಗಿರುವುದರಿಂದ ಗ್ರಾ.ಪಂ ಸದಸ್ಯರು ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಜಿ.ಪಂ.ನಲ್ಲೂ ಜನಪ್ರತಿನಿಧಿಗಳು ಇಲ್ಲದೆ ಇರುವುದರಿಂದ ಯಾವುದೇ ಮನವಿಗಳಿಗೂ ಸ್ಪಂದನ ದೊರೆಯುತ್ತಿಲ್ಲ. ಇತ್ತೀಚೆಗೆ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ ಅನುದಾನವೇ ಬಿಡುಗಡೆಯಾಗುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ನಲ್ವತ್ತೆಕ್ಕರೆಯಲ್ಲಿ ಶಾದಿ ಮಹಲ್ ವೊಂದಿದ್ದು, ಇಲ್ಲಿಗೆ ಕಾರ್ಯಕ್ರಮಕ್ಕೆ ಬರುವವರು ಹದಗೆಟ್ಟ ರಸ್ತೆಯಲ್ಲಿ ಪರದಾಡು ವಂತಾಗಿದೆ. ವಾಹನಗಳು ಬರಲು ಅಸಾಧ್ಯ ವಾದ ಪರಿಸ್ಥಿತಿ ಇದ್ದು, ರಸ್ತೆ ಅವ್ಯವಸ್ಥೆ ಗ್ರಾಮಸ್ಥರ ತಾಳ್ಮೆಯನ್ನು ಪರೀಕ್ಷೆ ಮಾಡಿದೆ.

ಈ ಭಾಗದ ಬರಡಿ ಗ್ರಾಮದ ರಸ್ತೆ ಕೂಡ ಸಂಪೂರ್ಣವಾಗಿ ಹದಗೆಟ್ಟಿದ್ದು, ಡಾಂಬರೀಕರಣಗೊಳ್ಳದೆ ಹಲವು ವರ್ಷಗಳೇ ಕಳೆದಿವೆ. ಸುತ್ತಮುತ್ತಲ ಗ್ರಾಮಗಳ ಜಿ.ಪಂ ರಸ್ತೆಗಳು ಹೊಂಡ ಗುಂಡಿಗಳಿAದಲೇ ಕೂಡಿವೆ. ತಕ್ಷಣ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.