x

ಪೊನ್ನಂಪೇಟೆ, ನ. ೨೮: ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ದನಗಳನ್ನು ಕಟ್ಟಲು ಹೋದ ಸಂದರ್ಭ ವ್ಯಕ್ತಿಯೋರ್ವರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

ಬೆಳ್ಳೂರು ಗ್ರಾಮದ ನಿವಾಸಿ ರಮೇಶ್ ಎಂಬವರು ಬೆಳಗ್ಗಿನ ವೇಳೆ ಎಂದಿನAತೆ ತಮ್ಮ ಗದ್ದೆಯಲ್ಲಿ ದನಗಳನ್ನು ಕಟ್ಟಲು ತೆರಳಿದ್ದು, ಈ ಸಂದರ್ಭ ಹೆಜ್ಜೇನುಗಳು ದಾಳಿ ಮಾಡಿವೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ರಮೇಶ್ ತಮ್ಮ ಮನೆಯ ಕಡೆಗೆ ಓಡಿ ಬಂದಿದ್ದು, ಬಳಿಕ ಪ್ರಜ್ಞೆ ತಪ್ಪಿ ರಸ್ತೆ ಬದಿಯಲ್ಲಿ ಬಿದ್ದಿದ್ದಾರೆ. ದನ ಕಟ್ಟಲು ಹೋದ ಪತಿ ತಡವಾದರೂ ಮನೆಗೆ ಬಂದಿಲ್ಲ ಎಂದು ಪತ್ನಿ ತಷ್ಮ ಅವರು ರಮೇಶ್ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಪತಿ ಕರೆಯನ್ನು ಸ್ವೀಕರಿಸದಿರುವುದನ್ನು ಗಮನಿಸಿ ತಮ್ಮ ಗದ್ದೆಗೆ ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ರಸ್ತೆಯ ಬದಿಯಲ್ಲಿ ಹೆಜ್ಜೇನು ದಾಳಿಗೆ ತುತ್ತಾಗಿ ರಮೇಶ್ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದ್ದಾರೆ. ತಮ್ಮ ಪಕ್ಕದ ಮನೆ ನಿವಾಸಿ ಬಿದ್ದಪ್ಪ ಎಂಬವರಿಗೆ ಕರೆ ಮಾಡಿ ತಷ್ಮ ಅವರು ಮಾಹಿತಿ ನೀಡಿದ್ದಾರೆ. ನಂತರ ಬಿದ್ದಪ್ಪ ಮತ್ತು ತಷ್ಮ ಅವರು ರಮೇಶ್ ಅವರನ್ನು ಚಿಕಿತ್ಸೆಗಾಗಿ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ದಾಖಲಿಸಿದ್ದಾರೆ.