ನಾಪೋಕ್ಲು, ನ. ೨೮: ಸಮೀಪದ ಹೊದ್ದೂರು ಗ್ರಾಮದ ವಾಟೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಆರ್. ಅನಿತಾ ವಹಿಸಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಮಾಜಿ ಸೈನಿಕ ಸುಬ್ರಮಣಿ ಹಾಗೂ ಬಿ.ಕೆ. ಪೂವಮ್ಮ ಬಹುಮಾನಗಳನ್ನು ನೀಡಿ ಪುರಸ್ಕರಿಸಿದರು.
ಮೂರ್ನಾಡು ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಆರೋಗ್ಯ ಕಾರ್ಯಕರ್ತೆ ಎನ್.ಎಸ್. ಸವಿತಾ, ಹಿರಿಯರಾದ ಹೆಚ್.ಟಿ. ಜೌರಿ, ಆಶಾ ಕಾರ್ಯಕರ್ತೆ ಹೆಚ್.ಡಿ. ರೂಪ, ಅಂಗನವಾಡಿ ಕಾರ್ಯಕರ್ತೆ ಪೊನ್ನಮ್ಮ, ಅಂಗನವಾಡಿ ಸಹಾಯಕಿ ಬಿ. ಸೀತಮ್ಮ, ಪ್ರೇಮ, ಪೋಷಕರು ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.