ಸೋಮವಾರಪೇಟೆ, ನ. ೨೮: ತಾಲೂಕು ಶಾಲಾ ಶಿಕ್ಷಣ ಇಲಾಖೆ, ಮತದಾರರ ಸಾಕ್ಷರತಾ ಸಂಘದ ವತಿಯಿಂದ ಮತದಾರರ ದಿನಾಚರಣೆ ಅಂಗವಾಗಿ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧೆಗಳಿಗೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ ಚಾಲನೆ ನೀಡಿದರು. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳು, ಕನ್ನಡ, ಇಂಗ್ಲೀಷ್ ಪ್ರಬಂಧ, ರಸಪ್ರಶ್ನೆ, ಭಿತ್ತಿಪತ್ರ ತಯಾರಿಕೆ ಸ್ಪರ್ಧೆಗಳಲ್ಲಿ ಭಾಗವ ಹಿಸಿದ್ದರು. ನೋಡೆಲ್ ಅಧಿಕಾರಿ ಶಿವಕುಮಾರ್, ಮುಖ್ಯ ಶಿಕ್ಷಕಿ ಯಶೋಧಮ್ಮ, ತೀರ್ಪುಗಾರರಾಗಿ ಶಾಂತಳ್ಳಿ ಕ್ಲಸ್ಟರ್ ಸಿಆರ್‌ಪಿ ಚೈತ್ರ, ಸೋಮವಾರಪೇಟೆ ಕ್ಲಸ್ಟರ್‌ನ ಸಿಆರ್‌ಪಿ ಪ್ರೇಮ, ಬಿಟಿಆರ್‌ಪಿ ರಂಜಿತಾ, ಕ್ವೀಜ್ ಮಾಸ್ಟರ್ ವಿಜಯ್ ಇದ್ದರು.