ವೀರಾಜಪೇಟೆ, ನ. ೨೮: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಂರ್ರಾಷ್ಟಿçÃಯ ರ್ಯಾಲಿ ಪಟು, ಅರ್ಜುನ ಪ್ರಶಸ್ತಿ ವಿಜೇತ ಗೌರವ್ ಗಿಲ್ ಅವರೊಂದಿಗೆ ಸಂವಾದ ನಡೆಸಲಾಯಿತು.
ಅಮ್ಮತ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಟ್ಟ ಜಿಲ್ಲೆಯಲ್ಲಿ ಕಾರ್ ರ್ಯಾಲಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ. ಕಾಫಿ ತೋಟದ ಒಳಗಿನ ರಸ್ತೆಯಲ್ಲಿ ರ್ಯಾಲಿ ತೆರಳುವುದು ವಿಶಿಷ್ಟ ಅನುಭವ ನೀಡಿದೆ ಎಂದರು. ಕಾಫಿ ತೋಟದ ಮಣ್ಣು ರಸ್ತೆಗಳು ಕಠಿಣವಾಗಿದ್ದು, ಉಳಿದ ರ್ಯಾಲಿಗಿಂತ ಎಚ್ಚರಿಕೆಯಿಂದ ತೆರಳಬೇಕು ಎಂದರು. ಪಾಶ್ಚಿಮಾತ್ಯ ರಾಷ್ಟçಗಳಲ್ಲಿ ಕಾರ್ ರ್ಯಾಲಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ರ್ಯಾಲಿಗೆ ಮಹತ್ವ ನೀಡಲಾಗುತ್ತಿದೆ. ಹಾಗಾಗಿ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಜಿಲ್ಲಾ ಸಂಘದ ಕಾರ್ಯದರ್ಶಿ ಎ.ಎನ್. ವಾಸು, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷÀ ರೆಜಿತ್ ಕುಮಾರ್ ಗುಹ್ಯ, ಉಪಾಧ್ಯಕ್ಷ ಪುತ್ತಂ ಪ್ರದೀಪ್, ನಿರ್ದೇಶಕರಾದ ಕಿಶೋರ್ ಕುಮಾರ್ ಶೆಟ್ಟಿ, ಪಿ.ವಿ. ಅಂತೋಣಿ, ಎಂ.ಎ. ಕೃಷ್ಣ, ತೇಜಸ್ ಪಾಪಯ್ಯ ಹಾಜರಿದ್ದರು.