ಸಿದ್ದಾಪುರ, ನ. ೨೮: ಹಾಕತ್ತೂರು ತೊಂಬತ್ತುಮನೆ ಗ್ರಾಮದ ರಸ್ತೆಗೆ ಅಡ್ಡವಾಗಿರುವ ಚರಂಡಿಗೆ ನಿರ್ಮಿಸಿದ ಕಾಂಕ್ರೀಟ್ ಸ್ಲ್ಯಾಬ್ ಒಂದೇ ದಿನದಲ್ಲಿ ಕುಸಿದಿರುವ ಘಟನೆ ನಡೆದಿದೆ.
ಕಾಮಗಾರಿಯ ಪ್ರಾರಂಭದ ಹಂತದಲ್ಲೇ ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರೂ ಸಂಬAಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದು, ಅತೀ ಸಣ್ಣ ಕಂಬಿಯನ್ನು ಜೋಡಿಸಿ ಸರಿಯಾಗಿ ಮಿಶ್ರಣ ಇಲ್ಲದೆ ಕಾಂಕ್ರೀಟ್ ಮಾಡಿ ಕ್ಯೂರಿಂಗ್ ಮಾಡಿದ ಫಲವಾಗಿ ಮೊದಲನೇ ದಿನವೇ ಸ್ಲ್ಯಾಬ್ ಕುಸಿದು ಬಿದ್ದಿದೆ. ಸಂಬAಧಿಸಿದವರನ್ನು ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡಿದ್ದರು ಹಾಗೂ ವಾರ್ಡಿನ ಸದಸ್ಯರು ಮೌನ ವಹಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದ್ದು, ಕಾಮಗಾರಿ ಪೂರ್ಣವಾಗಿರುವುದಿಲ್ಲ ಹಾಗೂ ಕಾಮಗಾರಿಯ ಹಣ ಸಹ ಬಿಡುಗಡೆ ಮಾಡಿಲ್ಲ. ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಹಾಕತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ ‘ಶಕ್ತಿ’ಗೆ ಮಾಹಿತಿ ನೀಡಿದರು.