ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ನ. ೨೮: ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಫಿ ಸರಬರಾಜಿಗೆ ಕೊರತೆ ಆದ ಹಿನ್ನೆಲೆಯಲ್ಲಿ ಕಾಫಿ ದರ ದಿಢೀರ್ ಏರಿಕೆ ದಾಖಲಿಸಿದೆ. ಕಳೆದೆರಡು ವರ್ಷಗಳಿಂದ ಕಾಫಿ ದರ ಏರುಮುಖವಾಗಿಯೇ ಇದ್ದು ಕಾಫಿ ಬೆಳೆಯುವ ಪ್ರಮುಖ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟ, ತೋಟಗಳ ನಾಶ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಗುರುವಾರ ಕೊಡಗು ಮತ್ತು ಚಿಕ್ಕಮಗಳೂರಿನ ಮಾರುಕಟ್ಟೆಗಳಲ್ಲಿ ಕಾಫಿ ದರ ಹೊಸ ದಾಖಲೆ ಬರೆದಿದೆ. ಅರೇಬಿಕಾ ಪಾರ್ಚ್ಮೆಂಟ್ ದರ ೫೦ ಕೆ.ಜಿ. ಚೀಲಕ್ಕೆ ೨೧ ಸಾವಿರ ರೂಪಾಯಿಗಳಿಗೆ ತಲುಪಿದೆ. ೧೯೯೭ ರಲ್ಲಿ ಕಾಫಿಯನ್ನು ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುಮತಿ ನೀಡಿದ ನಂತರ ಇಷ್ಟು ದರ ಬಂದಿರುವುದು ಇದೇ ಮೊದಲಾಗಿದ್ದು ಇದು ಸರ್ವಕಾಲಿಕ ದಾಖಲೆ ದರವಾಗಿದೆ. ಮೊದಲಿನಿಂದಲೂ ಅರೇಬಿಕಾ ಕಾಫಿಯ ದರ ರೋಬಸ್ಟಾ ಕಾಫಿಯ ದರಕ್ಕಿಂತ ಶೇ. ೧೫ ರಿಂದ ೨೫ ರಷ್ಟು ಜಾಸ್ತಿಯೇ ಇರುತಿತ್ತು. ಆದರೆ ಕಳೆದ ಕೆಲ ತಿಂಗಳುಗಳಿAದ ರೋಬಸ್ಟಾ ಕಾಫಿಯು ಅರೇಬಿಕಾ ಕಾಫಿ ದರವನ್ನೂ ಹಿಂದಿಕ್ಕಿ ಹೆಚ್ಚಿನ ಬೇಡಿಕೆ ದಾಖಲಿಸಿತ್ತು. ಆದರೆ ಕಳೆದ ಮೂರು ದಿನಗಳಿಂದ ಮತ್ತೆ ಅರೇಬಿಕಾ ಕಾಫಿ ದರದಲ್ಲಿ ರೋಬಸ್ಟಾ ಕಾಫಿಯನ್ನು ಹಿಂದಿಕ್ಕಿ ತನ್ನ ಪ್ರಾಬಲ್ಯ ಮೆರೆದಿದೆ. ಕಳೆದ ಮೂರು ದಿನಗಳಲ್ಲಿ ಕಾಫಿ ದರ ಪಾರ್ಚ್ಮೆಂಟ್ ಚೀಲವೊಂದಕ್ಕೆ ೮೦೦ ರಿಂದ ೧೦೦೦ ರೂಪಾಯಿಗಳವರೆಗೆ ಏರಿಕೆ ದಾಖಲಿಸಿ ಅಚ್ಚರಿ ಮತ್ತು ಸಂತಸ ಮೂಡಿಸಿದೆ.

ಗುರುವಾರ ದೇಶೀ ಮಾರುಕಟ್ಟೆಯಲ್ಲಿ ರೋಬಸ್ಟಾ ಕಾಫಿ ದರ ಪಾರ್ಚ್ಮೆಂಟ್ ೫೦ ಕೆ.ಜಿ. ಚೀಲಕ್ಕೆ ೧೯,೫೦೦-೨೦ ಸಾವಿರ ರೂಪಾಯಿಗಳಿಗೆ ಇತ್ತು. ಅರೇಬಿಕಾ ಪಾರ್ಚ್ಮೆಂಟ್ ದರ ಚೀಲಕ್ಕೆ ೨೦,೭೦೦ ಯಿಂದ ೨೧,೧೦೦ ರೂಪಾಯಿಗೆ ಮಾರಾಟ ಆಯಿತು. ರೋಬಸ್ಟಾ ಚೆರಿ ದರ ೧೧ ಸಾವಿರ ರೂಪಾಯಿ ಇದ್ದು ಅರೇಬಿಕಾ ಚೆರಿ ದರ ಕೂಡ ೧೧ ಸಾವಿರದ ಆಸು ಫಾಸಿನಲ್ಲಿಯೇ ಇದೆ. ಚಿಕ್ಕಮಗಳೂರಿನಲ್ಲಿ ದರ ೫೦ ಕೆ.ಜಿ.ಗೆ ೧೦೦-೨೦೦ ರಷ್ಟು ವ್ಯತ್ಯಾಸ ಇತ್ತು. ಸೋಮವಾರಪೇಟೆಯ ಬ್ಲಾನ್ ಕಾಫಿಯಲ್ಲಿ ರೊಬಸ್ಟಾ ಪಾರ್ಚ್ಮೆಂಟ್ ದರ ೧೯,೮೦೦ ಮತ್ತು ಚೆರಿ ದರ ೧೦,೯೦೦ ಇತ್ತು. ಅರೇಬಿಕಾ ಪಾರ್ಚ್ಮೆಂಟ್ ದರ ೨೦,೯೦೦ ಮತ್ತು ರೋಬಸ್ಟಾ ಪಾರ್ಚ್ಮೆಂಟ್ ದರ ೨೦ ಸಾವಿರ ಇತ್ತು. ಕಾಫಿ ಕೊಯ್ಲಿನ ಸಮಯದಲ್ಲಿ ಸಾಮಾನ್ಯವಾಗಿ ದರ ಕಡಿಮೆ ಆಗುತ್ತದೆ. ಆದರೆ ಕೊಯ್ಲಿನ ಸಮಯದಲ್ಲಿ ದರ ಏರಿಕೆ ಆಗಿರುವುದು ಬೆಳೆಗಾರರಿಗೂ ಸಂತಸ ತಂದಿದೆ. ಅಂರ‍್ರಾಷ್ಟಿçÃಯ ಮಾರುಕಟ್ಟೆಗೆ ಕಾಪಿಯ ಕೊರತೆ ಉಂಟಾಗಿರುವುದೇ ಕಾಫಿ ದರ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶವಾದ ಬ್ರೆಜಿಲ್ ವಿಶ್ವದ ಅರೇಬಿಕಾ ಕಾಫಿ ಉತ್ಪಾದನೆಯಲ್ಲಿ ಶೇ. ೪೦ ರಷ್ಟು ಪಾಲು ಹೊಂದಿದೆ. ಆದರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಸಾವಿರಾರು ಹೆಕ್ಟೇರ್ ಕಾಫಿ ತೋಟಗಳೇ ನಾಶವಾಗಿದ್ದು ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. ವಾರ್ಷಿಕ ಸುಮಾರು ೨೬ ಲಕ್ಷ ಟನ್ ಕಾಫಿ ಉತ್ಪಾದಿಸುವ ಬ್ರೆಜಿಲ್‌ನಲ್ಲಿ ಉತ್ಪಾದನೆ ಗಣನೀಯ ಕುಸಿತವಾಗಿದೆ.

ವಿಶ್ವದ ಎರಡನೇ ಅತ್ಯಂತ ದೊಡ್ಡ ರೋಬಸ್ಟಾ ಕಾಫಿ ಉತ್ಪಾದಕ ರಾಷ್ಟçವಾಗಿರುವ ವಿಯಟ್ನಾಂ ಸುಮಾರು ೨೭ ಲಕ್ಷ ಟನ್ ಕಾಫಿ ಉತ್ಪಾದಿಸುತ್ತದೆ. ವಿಶ್ವದ ರೋಬಸ್ಟಾ ಕಾಫಿಯ ಒಟ್ಟು ಉತ್ಪಾದನೆಯಲ್ಲಿ ಶೇ. ೩೮ ರಷ್ಟು ವಿಯಟ್ನಾಂ ಪಾಲು ಆಗಿದೆ. ಆದರೆ ವಿಯಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ ಕುಸಿತ ಆಗಿದ್ದು ಮಾರುಕಟ್ಟೆಯಲ್ಲಿ ರೋಬಸ್ಟಾ ಕಾಫಿ ದರ ಅರೇಬಿಕಾ ದರವನ್ನು ಹಿಂದಿಕ್ಕಲು ಇದೇ ಮುಖ್ಯ ಕಾರಣವಾಗಿದೆ.