ವೀರಾಜಪೇಟೆ, ನ. ೨೮: ಪಟ್ಟಣದ ಸಂತ ಅನ್ನಮ್ಮ ಪ್ರೌಢ ಶಾಲೆಯಲ್ಲಿ ಎನ್.ಸಿ.ಸಿ. ದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸ ಲಾಯಿತು. ಮೊದಲಿಗೆ ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್ ಮಾತನಾಡಿ, ಎನ್ಸಿಸಿ ಘಟಕವು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಪರಸ್ಪರ ಸಹಕಾರ ಮನೋಭಾವನೆಯನ್ನು ಬೆಳೆಸಲು ಸಹಕಾರಿಯಾಗಿದೆ.
ವಿದ್ಯಾರ್ಥಿಗಳು ಸಕ್ರಿಯವಾಗಿ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಾದರಿ ಪ್ರಜೆಗಳಾಗಿ ಬಾಳಿ ಎಂದು ಕರೆ ನೀಡಿದರು.
ಎನ್ಸಿಸಿ ಘಟಕದ ವಿದ್ಯಾರ್ಥಿ ಜೋಬಿ ಜಾರ್ಜ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಪ್ರೌಢ ಶಾಲೆಯ ಎನ್ಸಿಸಿ ಏರ್ ವಿಂಗ್ ಹಾಗೂ ಆರ್ಮಿ ವಿಂಗ್ ವತಿಯಿಂದ ಸೈಕ್ಲೊಥಾನ್ ಕಾರ್ಯಕ್ರಮಕ್ಕೆ ವ್ಯವಸ್ಥಾಪಕರಾದ ರೆ. ಫಾ. ಜೇಮ್ಸ್ ಡೊಮಿನಿಕ್ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಬೆನ್ನಿ ಜೋಸೆಫ್ ರವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ರೋಸಿ, ಎನ್ಸಿಸಿ ಅಧಿಕಾರಿ ಅಬ್ದುಲ್ ಮುನೀರ್, ಸಹನ ರಹಮತ್ ರವರು ಉಪಸ್ಥಿತರಿದ್ದರು. ಜಾಥಾವು ಸಂತ ಅನ್ನಮ್ಮ ಪ್ರೌಢ ಶಾಲೆಯಿಂದ ಆರಂಭಗೊAಡು ಪೆರಂಬಾಡಿ ಚೆಕ್ ಪೋಸ್ಟ್ವರೆಗೂ ಸಾಗಿತು.
ತದನಂತರ ಪೆರಂಬಾಡಿಯಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಎನ್ಸಿಸಿ ಕೆಡೆಟ್ಗಳು ಉಪಸ್ಥಿತರಿದ್ದರು.