ಮಡಿಕೇರಿ, ನ. ೨೩: ವೀರ ಸೇನಾನಿಗಳಾಗಿ ವಿಶ್ವ ಖ್ಯಾತಿ ಹೊಂದಿರುವ ಕೊಡಗಿನ ಹೆಮ್ಮೆಯ ಪುತ್ರರಾದ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳನ್ನು ಕೀಳುಮಟ್ಟದಲ್ಲಿ ಅವಹೇಳನ ಮಾಡಿರುವ ಪ್ರಕರಣದ ಬಗ್ಗೆ ಇನ್ನಷ್ಟು ಖಂಡನೆ ವ್ಯಕ್ತವಾಗಿದೆ.

ಕೊಡವ ಸಮಾಜ ಒಕ್ಕೂಟ ಸೇರಿದಂತೆ ಹಲವು ಸಮಾಜ-ಸಂಘಟನೆ, ಮಾಜಿ ಸೈನಿಕರು ಈ ಕೃತ್ಯವನ್ನು ಖಂಡಿಸಿದ್ದು, ಕೃತ್ಯದ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಂಧಿತರಾಗಿ ಬಿಡುಗಡೆಗೊಂಡಿರುವ ಆರೋಪಿ ವೃತ್ತಿಯಲ್ಲಿ ವಕೀಲರೂ ಆಗಿರುವ ವಿದ್ಯಾಧರ್ ಅವರನ್ನು ಬಾರ್ ಕೌನ್ಸಿಲ್ ಸೇರಿ ವಕೀಲ ವೃತ್ತಿಯಿಂದ ಅಮಾನತುಗೊಳಿಸಲು ಆಗ್ರಹ ಕೇಳಿ ಬಂದಿದೆ.

ಕೊಡವ ಸಮಾಜ ಒಕ್ಕೂಟ

ಸೇನಾ ದಿಗ್ಗಜರುಗಳಾಗಿ, ವಿಶ್ವ ಖ್ಯಾತಿ ಪಡೆದಿರುವ ಕೊಡಗಿನ ಹೆಮ್ಮೆಯ ಸೇನಾನಿಗಳಾದ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರುಗಳ ಬಗ್ಗೆ ಅವಹೇಳನಕಾರಿ ಸಂದೇಶ ಹಾಕಿ ಕೊಡಗಿಗೆ ಮುಜುಗರ ತಂದಿರುವ ಪ್ರಕರಣವನ್ನು ಕೊಡವ ಸಮಾಜ ಒಕ್ಕೂಟ ಖಂಡಿಸುವುದಾಗಿ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಅವರುಗಳು ಈ ಪ್ರಕರಣದಲ್ಲಿ ಆರೋಪಿಯಾದ ವಕೀಲ ವಿದ್ಯಾಧರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಾಮರಸ್ಯದ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು. ಸ್ವತಃ ವಕೀಲರೂ ಆಗಿರುವ ಇವರ ನಡತೆ ತೀವ್ರ ಖಂಡನೀಯ. ಇವರನ್ನು ವಕೀಲ ವೃತ್ತಿಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸುವುದಾಗಿ ಅವರುಗಳು ತಿಳಿಸಿದ್ದಾರೆ.

ಹೆಗ್ಗಡೆ ಸಮಾಜ ಖಂಡನೆ

ವೀರ ಸೇನಾನಿಗಳಾಗಿರುವ ಕಾರ್ಯಪ್ಪ-ತಿಮ್ಮಯ್ಯ ಅವರುಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ ಪ್ರಕರಣವನ್ನು ಕೊಡಗು ಹೆಗ್ಗಡೆ ಸಮಾಜ ಖಂಡಿಸಿದೆ. ಈ ಬಗ್ಗೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕೊಡಗು ಬಂದ್ ಎಚ್ಚರಿಕೆ

(ಮೊದಲ ಪುಟದಿಂದ) ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರು ಜಾತಿ, ಮತ ಬೇಧ, ಧರ್ಮಗಳನ್ನು ಮೀರಿದ ಅಪ್ರತಿಮ ವ್ಯಕ್ತಿತ್ವದ ವೀರ ಸೇನಾಧಿಕಾರಿಗಳಾಗಿದ್ದಾರೆ. ಭಾರತೀಯ ಸೇನೆಗೆ ಮತ್ತು ಭಾರತದ ರಕ್ಷಣೆಗೆ ಇವರಿಬ್ಬರು ನೀಡಿದ ಕೊಡುಗೆ ಅಪಾರವಾಗಿದೆ. ಇವರನ್ನು ಅವಹೇಳನ ಮಾಡಿರುವುದು ದೇಶದ್ರೋಹದ ಕೃತ್ಯವಾಗಿದೆ. ಇಡೀ ದೇಶದ ಜನರೇ ಬೇಸರ ಪಡುವಂತಹ ಪ್ರಕರಣ ಇದಾಗಿದೆ. ಆದ್ದರಿಂದ ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ತಕ್ಷಣ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪೊನ್ನಂಪೇಟೆ: ಭಾರತೀಯ ಸೇನೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವಕೀಲ ವಿದ್ಯಾಧರ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕಾಳಿಮಾಡ ಎಂ. ಮೋಟಯ್ಯ ಅವರ ನೇತೃತ್ವದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವೀರ ಸೇನಾನಿಗಳನ್ನು ಅವಹೇಳನ ಮಾಡಿರುವುದು ದೇಶದ್ರೋಹ ಪ್ರಕರಣಕ್ಕೆ ಸಮಾನವಾಗಿದ್ದು, ಇದನ್ನು ಹಗುರವಾಗಿ ಪರಿಗಣಿಸದೇ, ಮುಂದಿನ ತನಿಖಾ ಅವಧಿಯಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಸಂದರ್ಭ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೊಡವರ, ಕೊಡಗಿನ ಜನರ ಹಾಗೂ ಭಾರತೀಯ ಸೇನೆಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸಲ್ಲಿಕೆ ಸಂದರ್ಭ ಕೊಡವ ಸಮಾಜದ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೆಮಾಡ ಸುಧೀರ್, ಖಚಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ನಿರ್ದೇಶಕರಾದ ಚೆಪ್ಪುಡಿರ ರಾಕೇಶ್ ದೇವಯ್ಯ, ಚೀರಂಡ ಕಂದ ಸುಬ್ಬಯ್ಯ, ಕೊಣಿಯಂಡ ಸಂಜು ಸೋಮಯ್ಯ, ಚೀರಂಡ ಸುನಿಲ್ ಇದ್ದರು. ಬಳಿಕ ಸಮಾಜದ ನಿರ್ದೇಶಕ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಮಾತನಾಡಿ, ವೀರ ಸೇನಾನಿಗಳನ್ನು ಅವಹೇಳನ ಮಾಡಿದ ವಕೀಲ ವಿದ್ಯಾಧರ್ ಅವರ ಸದಸ್ಯತ್ವವನ್ನು ವಜಾಗೊಳಿಸುವಂತೆ ಬಾರ್ ಅಸೋಸಿಯೇಷನ್ ಹಾಗೂ ವಕೀಲರ ಪರಿಷತ್‌ಗೂ ಕೊಡವ ಸಮಾಜದಿಂದ ಪತ್ರದ ಮೂಲಕ ಒತ್ತಾಯಿಸಲಾಗಿದೆ ಎಂದರು.ಗಡಿಪಾರಿಗೆ ಸಿಎನ್‌ಸಿ ಆಗ್ರಹ

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ವಕೀಲ ವಿದ್ಯಾಧರ್ ಸಾಮಾಜಿಕ ಜಾಲತಾಣದ ಮೂಲಕ ಅವಹೇಳನ ಮಾಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿಯ ಬೆಳವಣಿಗೆ ದೇಶಭಕ್ತಿ ಮತ್ತು ರಾಷ್ಟಿçÃಯವಾದಿ ಶಕ್ತಿಗಳನ್ನು ದುರ್ಬಲಗೊಳಿಸುತ್ತವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದ್ದಾರೆ.

ವಿದ್ಯಾಧರ್ ಅವರನ್ನು ಕೊಡಗಿನಿಂದ ಶಾಶ್ವತವಾಗಿ ಗಡಿಪಾರು ಮಾಡಿ ಕೊಡವ ಸಮುದಾಯಕ್ಕೆ ಹೆಚ್ಚಿನ ಹಾನಿಯಾಗದಂತೆ ತಡೆಯಬೇಕು. ಗುಪ್ತಚರ ಸಂಸ್ಥೆಗಳು ವಿದ್ಯಾಧರ್ ಅವರ ಸಂಪರ್ಕಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು.

ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಿದ ಪ್ರಕರಣವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ವೀರಾಜಪೇಟೆ: ಮಡಿಕೇರಿಯ ವಕೀಲ ವಿದ್ಯಾಧರ್ ಅವರು ಶ್ರೀವತ್ಸ ಭಟ್ ಹೆಸರಿನಲ್ಲಿ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಯುದ್ಧ ಪ್ರವೀಣ ಕೆ.ಎಸ್. ತಿಮ್ಮಯ್ಯ ಅವರ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಹಾಗೂ ಹಾಲಿ ಸೈನಿಕರುಗಳಿಗೆ, ವೀರ ನಾರಿಯರಿಗೆ ಅವರ ಅವಲಂಭಿತರಿಗೆ ತುಂಬಾ ನೋವಾಗಿದೆ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೈನಿಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ಅವಹೇಳನಕಾರಿ ಸಂದೇಶಗಳು ಕೊಡವ ಜನಾಂಗಕ್ಕೆ ಮಾತ್ರ ಸೀಮಿತವಲ್ಲ. ಇಡೀ ರಾಷ್ಟçಕ್ಕೆ ವಿಶೇಷವಾಗಿ ಭಾರತೀಯ ಸೇನೆಗೆ ಮಾಡಿದ ಅಪಮಾನವಾಗಿದೆ. ಇಂತಹ ಕುಕೃತ್ಯ ಎಸಗಿದ ವ್ಯಕ್ತಿ ಬಂಧನವಾಗಿದ್ದರೂ ಇವರನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಈಗಾಗಲೇ ಇವರ ವಿರುದ್ಧ ರಾಜ್ಯ ಮಟ್ಟದಲ್ಲಿ ಪ್ರತಿಭಟನೆಯನ್ನು ರಾಜ್ಯ ಸಂಘ ಆಯೋಜಿಸಿದ್ದು ಜಿಲ್ಲೆಯಲ್ಲೂ ಕೂಡ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಹ ಸಂಚಾಲಕ ಬಾಳೆಕುಟ್ಟಿರ ದಿನಿ ಬೋಪಯ್ಯ, ಸಮಿತಿ ಸದಸ್ಯರಾದ ಅಣ್ಣಳಮಾಡ ಬೋಪಯ್ಯ, ಬಾಚುರ ಎಸ್. ಪೂಣಚ್ಚ ಉಪಸ್ಥಿತರಿದ್ದರು.ಆಮ್ ಆದ್ಮಿ ಪಾರ್ಟಿ ಖಂಡನೆ

ಮಡಿಕೇರಿ: ಭಾರತ ದೇಶದ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಪಮಾನಿಸಿರುವುದು ಖಂಡನೀಯವೆAದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಮಾಜದ ಸಾಮರಸ್ಯವನ್ನು ಕದಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಭಾರತೀಯ ಸೇನೆಗೆ ಫೀ.ಮಾ. ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಕೊಡಗು ಜಿಲ್ಲೆಯ ಅನೇಕ ವೀರ ಯೋಧರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ದೇಶದ ರಕ್ಷಣೆಗಾಗಿ ಯುದ್ಧಗಳನ್ನು ಎದುರಿಸಿ ತ್ಯಾಗಬಲಿದಾನ ಮಾಡಿದ್ದಾರೆ. ವೀರ ಯೋಧರಿಗೆ ನಿತ್ಯ ಗೌರವ ತೋರಬೇಕೆ ಹೊರತು ಅವಹೇಳನ ಮಾಡುವುದು ಸರಿಯಲ್ಲ. ಜಿಲ್ಲೆಯ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕದಡುವ ಕಿಡಿಗೇಡಿಗಳ ಪಿತೂರಿಯನ್ನು ಸರ್ಕಾರ ವಿಫಲಗೊಳಿಸಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.ಪೊನ್ನಂಪೇಟೆ ಮಾಜಿ ಸೈನಿಕರ ಸಂಘ

ಶ್ರೀಮAಗಲ: ಪೊನ್ನಂಪೇಟೆಯ ಮಾಜಿ ಸೈನಿಕರ ಸಂಘ ವತಿಯಿಂದ ಅವಹೇಳನ ಪ್ರಕರಣವನ್ನು ಖಂಡಿಸಲಾಗಿದೆ. ಕೊಡಗಿನ ಸೇನಾನಿಯವರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜ. ಕೆ.ಎಸ್. ತಿಮ್ಮಯ್ಯ ಅವರ ಕುರಿತು ಸಪ್ತಸಾಗರ ಎಂಬ ವಾಟ್ಸಾö್ಯಪ್ ಮುಖಾಂತರ ಕೀಳು ಸಂದೇಶ ಹರಿಬಿಟ್ಟ ಮಡಿಕೇರಿಯ ವಕೀಲ ಕುಡೆಕಲ್ಲು ವಿದ್ಯಾದರ ತೀರಾ ಹೀನಾಯ ಪದ ಬಳಕೆ ಮಾಡಿದ್ದು, ಇಡೀ ಭಾರತೀಯ ಸೈನ್ಯ ಪರಂಪರೆಗೆ ಅವಮಾನವಾಗಿದೆ. ಮಾಜಿ ಸೈನಿಕರು ಯಾವುದೇ ಕಾರಣಕ್ಕೂ ಇದನ್ನು ಸಹಿಸಿಕೊಳ್ಳುವುದಿಲ್ಲ. ಬಂಧನವಾದ ವಕೀಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊನ್ನಂಪೇಟೆಯ ಮಾಜಿ ಸೈನಿಕರ ಅಧ್ಯಕ್ಷ ಐ.ಕೆ. ಮಂದಣ್ಣ ಅವರು ಸದಸ್ಯರ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ.

ನಮ್ಮ ದೇಶದ ಅಪ್ರತಿಮ ವೀರ ಯೋಧರನ್ನು ಮತ್ತು ಮಾಜಿ ಸೈನಿಕರನ್ನು ಅವಮಾನಿಸಿ ನಮ್ಮ ದೇಶಕ್ಕೆ ಅಗೌರವ ತೋರಿದ್ದಾರೆ. ರಾಷ್ಟç ವಿರೋಧಿ ಕ್ರಮದಡಿಯಲ್ಲಿ ಈತನಿಗೆ ಶಿಕ್ಷೆಯಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.ಕಠಿಣ ಕ್ರಮ ಜರುಗಿಸಬೇಕು

ಮಡಿಕೇರಿ: ವೀರ ಸೇನಾನಿಗಳಿಗೆ ಅವಮಾನ ಮಾಡಿರುವ ಆರೋಪಿ ವಕೀಲ ವಿದ್ಯಾಧರ್ ಅವರನ್ನು ಬಾರ್ ಕೌನ್ಸಿಲ್‌ನಿಂದ ವಜಾಗೊಳಿಸಬೇಕಲ್ಲದೆ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಆಗ್ರಹಿಸಿದ್ದಾರೆ.

ಜಿಲ್ಲೆಯ ಬಹುತೇಕ ಸಮಾಜದ ಹಲವರು ಅವರವರ ವೈಯಕ್ತಿಕ ಸಾಧನೆಯಿಂದ ಗುರುತಿಸಲ್ಪಟ್ಟಿದ್ದು, ಈ ಬಗ್ಗೆ ಪರಸ್ಪರ ಗೌರವವಿದೆ. ಆದರೆ ವಕೀಲರಾಗಿರುವ ಇವರು ದ್ವೇಷಾಸೂಯೆಯಿಂದ ಅವಹೇಳನ ಮಾಡಿರುವುದು ಖಂಡನೀಯವಾಗಿದ್ದು, ಕಠಿಣ ಕ್ರಮ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬ್ರಾಹ್ಮಣ ಸಮಾಜ ಒತ್ತಾಯ

ಮಡಿಕೇರಿ: ಕೊಡಗಿನ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಹಾಗೂ ಕೊಡವ ಸಮುದಾಯದ ವಿರುದ್ಧ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಪ್ರಕರಣವನ್ನು ಖಂಡಿಸಿರುವ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು, ಬ್ರಾಹ್ಮಣ ಸಮಾಜದ ವ್ಯಕ್ತಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.ಶ್ರೀಮಂಗಲ : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನು ಅತಿ ಹೀನಾಯವಾಗಿ ಅವಹೇಳನ ಮಾಡಿರುವ ಮಡಿಕೇರಿಯ ವಕೀಲ ವಿದ್ಯಾಧರ್ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಟಿ. ಶೆಟ್ಟಿಗೇರಿ ಕೊಡವ ಸಮಾಜ ಒತ್ತಾಯಿಸಿದೆ.

ಈ ಬಗ್ಗೆ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಗೌರವ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ನಿರ್ದೇಶಕ ಬಾದುಮಂಡ ವಿಷ್ಣು ಕಾರ್ಯಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಅವರುಗಳು ಶ್ರೀಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೇನಾನಿಗಳಿಗೆ ಅಪಮಾನ ಮಾಡಿದ ವಿದ್ಯಾಧರ್ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.