ಪೊನ್ನಂಪೇಟೆ, ನ. ೨೪: ಇತಿಹಾಸ ಪ್ರಸಿದ್ಧ ಕುಂದಬೆಟ್ಟದ ಮೇಲಿರುವ ಬೊಟ್ಟ್'ಲಪ್ಪ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಪೂಜೆ ತಾ. ೨೫ ರಂದು (ಇಂದು) ನಡೆಯಲಿದೆ.
ಬೊಟ್ಟಿಯತ್ ನಾಡಿನ ಕುಂದ ಶಾಲೆಯ ಸಮೀಪದ ಶ್ರೀ ಈಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಕುಂದ ಬೆಟ್ಟದಲ್ಲಿರುವ ಬೊಟ್ಟ್'ಲಪ್ಪ ದೇವಸ್ಥಾನಕ್ಕೆ ಪಾಂಡವರ ಕಾಲದ ಇತಿಹಾಸವಿದ್ದು, ಇಲ್ಲಿನ ದೇವಸ್ಥಾನದಲ್ಲಿ ಕಾವೇರಿ ತೀರ್ಥೋದ್ಭವ ಮರುದಿನ ವರ್ಷದ ಮೊದಲ ಬೋಡ್ ನಮ್ಮೆ ನಡೆಯಲ್ಲಿದ್ದು, ಇದನ್ನು ಹೊರತುಪಡಿಸಿದರೆ ಕಾರ್ತಿಕ ಮಾಸದಲ್ಲಿ ಮಾತ್ರ ಪೂಜೆ ನಡೆಯಲಿದೆ. ಈ ವರ್ಷದ ಕೊನೆಯ ಕಾರ್ತಿಕ ಪೂಜೆ ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಳ್ಳಲಿದ್ದು, ಮಧ್ಯಾಹ್ನ ಸಾಮೂಹಿಕ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ಬೆಟ್ಟವೇರಲು ಕಷ್ಟವಿರುವವರಿಗೆ ಕೈಕೇರಿ ಭಾಗದಿಂದ ಮನೆಯಪಂಡ ಫೆರ್ನ್ ಬ್ಯಾಂಕ್ ತೋಟ ದಿಂದ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.