ಪೊನ್ನಂಪೇಟೆ, ಅ. ೩೧: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಪುನರ್ ರಚಿಸಲಾಯಿತು. ಪೊನ್ನಂಪೇಟೆ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್. ಗೋವಿಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಸಂಚಾಲಕರಾಗಿ ರಜಿನಿಕಾಂತ್ ಅವರನ್ನು ಆಯ್ಕೆ ಮಾಡಲಾಯಿತು.

ನೂತನವಾಗಿ ಆಯ್ಕೆಯಾದ ಸಂಚಾಲಕರು ಮತ್ತು ಪದಾಧಿಕಾರಿಗಳು ಸಂಘಟನೆಯ ಬಲವರ್ಧನೆಗಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ನೊಂದ ದಲಿತರ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸಲು ಕಾಳಜಿ ತೋರಬೇಕು ಎಂದು ಗೋವಿಂದಪ್ಪ ಸಲಹೆ ನೀಡಿದರು.

ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಹೋರಾಟಗಾರ ಪಿ.ಎಸ್. ಮುತ್ತ, ಹಿಂದಿನ ಜಿಲ್ಲಾ ಸಂಚಾಲಕ ಸಿಂಗಿ ಸತೀಶ್, ಪದಾಧಿಕಾರಿಗಳಾದ ನಾಗೇಂದ್ರ, ಗಿರೀಶ್ ಎಸ್.ಟಿ., ಯೋಗೇಶ್, ಶಿವಕುಮಾರ್, ಷಣ್ಮುಗ, ರಾಜೇಶ್, ಮಂಜುಳಾ, ಶೋಭಾ, ಶಾರದಾ, ರಾಮದಾಸ್, ರಾಜಣ್ಣ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಇದ್ದರು.