ಚೆಟ್ಟಳ್ಳಿ, ಅ. ೩೧: ಶಿಥಿಲಗೊಂಡಿರುವ ದುಬಾರೆ ಸಮೀಪದ ಪುರಾತನ ವಾಸ್ತುಶಿಲ್ಪ ಕಲ್ಲಿನ ವೀರಭದ್ರ ದೇವಾಲಯ ಅಭಿವೃದ್ಧಿ ಕಾರ್ಯಕ್ಕೆ ಆಡಳಿತ ಮಂಡಳಿ ಮುಂದಾಗಿದ್ದು, ದೇವಾಲಯದ ಶುಚಿತ್ವ ಕಾರ್ಯದ ಜೊತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ದುಬಾರೆಯ ಕಲ್ಲಿನ ಕೆತ್ತನೆಯ ಪುರಾತನ ವೀರಭದ್ರ ದೇವಾಲಯದ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಸುತ್ತಲಿನ ಊರಿನವರು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ನಂತರ ಸಮೀಪದ ದುಬಾರೆಯ ಕಾವೇರಿ ಹೊಳೆಯಲ್ಲಿ ಕಲಶ ಪೂಜೆ ನೆರವೇರಿಸಿದರು. ಕಲಶÀವನ್ನು ದೇವಾಲಯಕ್ಕೆ ತಂದು ದೇವಾಲಯದಲ್ಲಿ ಗಂಗಾ ಪೂಜೆ ಸಲ್ಲಿಸಿದರು. ಪ್ರಸಾದ ವಿತರಣಾ ಕಾರ್ಯ ನೆರವೇರಿತು. ದೇವಾಲಯ ಅಭಿವೃದ್ಧಿಗಾಗಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷ ಕೆ.ಎಸ್. ರತೀಶ್, ಉಪಾಧ್ಯಕ್ಷ ಅನು ದೊಡ್ಡೆರ, ಕಾರ್ಯದರ್ಶಿ ಡಿಂಪಲ್, ಜಂಟಿ ಕಾರ್ಯದರ್ಶಿ ಸಚಿನ್, ಖಜಾಂಜಿ ಕೊಳಂಬೆ ವಿನು, ನಿರ್ದೇಶಕರಾದ ಬ್ರಿಜೇಶ್ ಎಂ.ಎಸ್., ರುದ್ರಪ್ಪ, ನವೀನ್, ಶ್ರೀಜೇಶ್, ಬಾಲಕೃಷ್ಣ, ರವಿ ಬೆಳ್ಯಪ್ಪ, ಪ್ರಸನ್ನ, ರಘು, ಮೊಣ್ಣಪ್ಪ, ರವಿ ಹಾಜರಿದ್ದರು.
ದೇವಾಲಯವು ಶಿಸ್ಥಿಲಾವಸ್ಥೆಗೆ ತಲುಪಿದರಿಂದ ಮುಂದಿನ ದಿನಗಳಲ್ಲಿ ದೇವಾಲಯ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.