ಮಡಿಕೇರಿ, ಅ. ೩೦: ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ನವೆಂಬರ್ ೩ ರಂದು ಮಡಿಕೇರಿಯ ಓಂಕಾರ ಸದನದಲ್ಲಿ ನಿಮ್ಮ ಪ್ರತಿಭೆ - ನಮ್ಮ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂದರ್ಭ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನದ ಗೌರವಾರ್ಪಣೆ ನೆರವೇರಲಿದೆ ಎಂದು ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮ ಮಾಹಿತಿ ನೀಡಿದ್ದಾರೆ.

ಸಮರ್ಥ ಕನ್ನಡಿಗರು ಸಂಸ್ಥೆಯಿAದ ನಡೆಯುವ ಸನ್ಮಾನಕ್ಕೆ ಟಿ.ಪಿ. ರಮೇಶ್ (ಸಾಹಿತ್ಯ ಸಂಘಟನೆ), ಕುಂಡ್ಯೊಳAಡ ದಿನೇಶ್ ಕಾರ್ಯಪ್ಪ (ಕ್ರೀಡಾ ಸಂಘಟನೆ), ಆರ್.ಕೆ. ಬಾಲಚಂದ್ರ (ಕನ್ನಡದಲ್ಲಿ ಬ್ಯಾಂಕಿAಗ್ ಮಾರ್ಗದರ್ಶನ), ಅರುಣ್ ಶೆಟ್ಟಿ (ಸಮಾಜಸೇವೆ), ತೇಲಪಂಡ ಆರತಿ ಸೋಮಯ್ಯ (ಶಿಕ್ಷಣ), ನಿಖಿಲ್ ರಾಮಮೂರ್ತಿ (ಬಿದಿರು ಕೃಷಿ), ಚಿತ್ರಾ ಆರ್ಯನ್ (ಸಂಗೀತ), ಸಂಗೀತ ರವಿರಾಜ್ (ಸಾಹಿತ್ಯ), ಎಸ್.ಕೆ. ಲಕ್ಷಿö್ಮÃಶ್ (ಮಾಧ್ಯಮ), ಓಬಳಿ (ಪೌರಸೇವೆ) ಬೆಂಗಳೂರಿನ ಲಕ್ಷಿö್ಮ ಲಿಂಗೇಶ್ (ಸಮಾಜಮುಖಿ ಕಾರ್ಯ), ನ. ೩ ರಂದು ಬೆಳಿಗ್ಗೆ ೧೦ ಗಂಟೆಗೆ ಆಯೋಜಿತ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಉದ್ಘಾಟಿಸಲಿದ್ದಾರೆ.

ವೈದ್ಯ ಸಾಹಿತಿ ಡಾ. ಕುಶ್ವಂತ್ ಕೋಳಿಬೈಲು, ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯಾಧ್ಯಕ್ಷ ಲಿಂಗೇಶ್ ಹುಣಸೂರು ಪಾಲ್ಗೊಳ್ಳಲಿದ್ದಾರೆ, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಆನಂದ್ ದೆಗ್ಗನಹಳ್ಳಿ ವಹಿಸಲಿದ್ದು, ಕವಿಗೋಷ್ಟಿಯಲ್ಲಿ ಬಿ.ಜಿ. ಅನಂತಶಯನ, ಗಿರೀಶ್ ಕಿಗ್ಗಾಲು, ಡಾ. ಸತೀಶ್, ಸಂಗೀತಾ ರವಿರಾಜ್, ರಂಜಿತ್ ಕವಲಪಾರ, ಕೃಪಾ ದೇವರಾಜ್, ಶ್ವೇತಾ ರವೀಂದ್ರ, ಹೇಮಂತ್ ಪಾರೇರ, ಸಹನಾ ಕಾಂತಬೈಲು, ಹರಿಣಿ ವಿಜಯ್, ಹೇಮಂತ್, ಹೆರೂರು, ಶ್ವೇತಾ ರವೀಂದ್ರ, ವಿನೋದ್ ಮೂಡಗದ್ದೆ ಪಾಲ್ಗೊಳ್ಳಲಿದ್ದಾರೆ.

ಸಂಜೆ ೩.೩೦ ಗಂಟೆಗೆ ಲಿಂಗೇಶ್ ಹುಣಸೂರು ಅಧ್ಯಕ್ಷತೆಯಲ್ಲಿ ಆಯೋಜಿತ ಸಾಧಕರಿಗೆ ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಹಿರಿಯ ಲೇಖಕಿ ರಾಜಲಕ್ಷಿö್ಮ ಗೋಪಾಲಕೃಷ್ಣ ನೆರವೇರಿಸಲಿದ್ದು, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್, ಮಡಿಕೇರಿ ಎಲ್‌ಐಸಿಯ ಶಾಖಾಧಿಕಾರಿ ದೀಪಕ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.

ಅಂದು ಜಾನಪದ ನೃತ್ಯ, ಕನ್ನಡ ನೃತ್ಯ, ಸಮೂಹಗಾಯನ, ಪ್ರಬಂಧ, ಚಿತ್ರಕಲಾ ಸ್ಪರ್ಧೆಗಳು ಆಯೋಜಿತವಾಗಿವೆ ಎಂದು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷಿö್ಮ ಮಾಹಿತಿ ನೀಡಿದ್ದಾರೆ.