ಮಡಿಕೇರಿ, ಅ. ೩೦: ಕೈಕೇರಿ ಸವಿತಾ ಸಮಾಜದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವೇದಪಂಡ ಆರ್. ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಕಟ್ಟಡದಲ್ಲಿ ನಡೆಯಿತು.

ಈ ಸಂದರ್ಭ ಸಂಘದ ಎಲ್ಲಾ ಸದಸ್ಯರು ಹಾಜರಾಗಿದ್ದು ಸಭೆಯಲ್ಲಿ ತಮ್ಮ ಸಲಹೆ ಸೂಚನೆ ನೀಡಿದರು. ಶಾಲಾ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಿ, ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಸಮಾಜದ ಸದಸ್ಯರಲ್ಲಿ ಉತ್ತಮ ಶ್ರೇಣಿಯಲ್ಲಿ ಇರುವವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಮಾಜದ ಕಾರ್ಯದರ್ಶಿ ತಾಪನೇರ ಎನ್. ಮಹೇಶ್ ಅವರು ಸ್ವಾಗತಿಸಿ, ನಿರ್ದೇಶಕ ಹಲ್‌ಚಿರ ಎಸ್. ಜಿಮ್ಮಣ್ಣ ಅವರು ವಂದಿಸಿದರು.