ಮಡಿಕೇರಿ, ಅ. ೩೦: ಶಿಕ್ಷಣ ಸಂಸ್ಥೆಗಳು ಭಾರತೀಯತೆಯೊಂದಿಗೆ ಉತ್ತಮ ಸಂಸ್ಕಾರವನ್ನೂ ಮಕ್ಕಳಿಗೆ ಬೋಧಿಸುವ ಕೇಂದ್ರಗಳಾಗಬೇಕಾದ ಅನಿವಾರ್ಯತೆ ಇಂದಿನ ದಿನಗಳ ಲ್ಲಿದ್ದು, ಉತ್ತಮ ಸಂಸ್ಕಾರ ಹೊಂದಿದ ಮಕ್ಕಳೇ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಕೊಡುಗೆ ನೀಡಬಲ್ಲವರಾಗಿದ್ದಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ, ಪತ್ರಕರ್ತ ಅನಿಲ್ ಎಚ್.ಟಿ ಹೇಳಿದರು.

ನಗರದ ಕೊಡಗು ವಿದ್ಯಾಲಯ ಶಾಲೆಯ ವೆಬ್‌ಸೈಟ್ ಕೊಡಗು ವಿದ್ಯಾಲಯ ಡಾಟ್‌ಕಾಮ್‌ಗೆ ಚಾಲನೆ ನೀಡಿ ಮಾತನಾಡಿದ ಅನಿಲ್, ಕೊಡಗು ವಿದ್ಯಾಲಯ ಶಾಲೆಯನ್ನು ೪೩ ವರ್ಷಗಳ ಹಿಂದೆ ಪ್ರಾರಂಭಿಸುವಲ್ಲಿ ದೇಶದ ಸೇನಾ ಪಡೆಯ ಪ್ರಥಮ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಮಹತ್ವದ ಕೊಡುಗೆ ಇದೆ. ಭಾರತೀಯ ಹಬ್ಬ, ಉತ್ಸವಗಳನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಕಲಿಸುವ ನಿಟ್ಟಿನಲ್ಲಿ ಕೊಡಗು ವಿದ್ಯಾಲಯ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ ಎಂದರು.

ದೀಪಾವಳಿ ಹಬ್ಬದ ಮೂಲಕ ಬೆಳಕಿಗೆ ಗೌರವ ನಮನ ಸಲ್ಲಿಸುವ ಸುವರ್ಣಾವಕಾಶ ಇದೆ, ಹಣತೆ ಹೇಗೆ ತನ್ನಲ್ಲಿನ ಬತ್ತಿಯನ್ನು ಸುಟ್ಟುಕೊಂಡು ತ್ಯಾಗಮಯಿ ಸಂಕೇತವಾಗಿ ಬೇರೆಯವರಿಗೆ ಒಳಿತಿನ ಬೆಳಕು ನೀಡುತ್ತದೆಯೋ ಅಂತೆಯೇ ನಾವೆಲ್ಲರೂ ಸಾಮಾಜಿಕ ಹೊಣೆಗಾರಿಕೆಯಿಂದ ನಮ್ಮಲ್ಲಿರುವ ನೆಮ್ಮದಿ, ಸಂತೋಷ ಎಂಬ ಬೆಳಕನ್ನೂ ಅದರ ಕೊರತೆ ಇರುವವರಿಗೆ ನೀಡುವ ಮೂಲಕ ಸಮಾಜವನ್ನು ಅಂಧಕಾರದಿAದ ಬೆಳಕಿನತ್ತ ಸಾಗಿಸಬೇಕಾಗಿದೆ ಎಂದು ಅನಿಲ್ ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಸಿ.ಎಸ್ ಗುರುದತ್, ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಜಿಲ್ಲಾ ಹೊಟೇಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ನೀಮಾ ಸಂಸ್ಥೆಯ ಅಧ್ಯಕ್ಷ ಡಾ. ರಾಜಾರಾಮ್, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ, ವೆಬ್‌ಸೈಟ್ ವಿನ್ಯಾಸಗೊಳಿಸಿದ ಪ್ರತಿಷ್ಟ, ಎ.ನೀಲಮ್ಮ ಕಾರ್ಯಪ್ಪ, ಪುಣ್ಯ ಗುರುದತ್, ಹಾಜರಿದ್ದರು, ಶಿಕ್ಷಕಿಯರಾದ ಭಾರತಿ, ನೇತ್ರ, ರೇಖಾ ಕೆ.ಕೆ, ವೀಣಾ ಮೊಣ್ಣಪ್ಪ, ಕಾರ್ಯಕ್ರಮ ನಿರ್ವಹಿಸಿದರು.