ವೀರಾಜಪೇಟೆ, ಅ. ೩೦: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ವೀರಾಜಪೇಟೆ ತಾಲೂಕು ಶಾಖೆಯ ೨೦೨೪-೨೦೨೯ನೇ ಕಾರ್ಯ ಕಾರಿ ಸಮಿತಿಗೆ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಿದೆ.
ಚುನಾವಣೆಯಲ್ಲಿ ಸರಕಾರಿ ಪ್ರೌಢ ಶಾಲೆ ಮತ ಕ್ಷೇತ್ರದಿಂದ ರಾಘವೇಂದ್ರ ಸಿ.ಎಂ., ಅರಣ್ಯ ಇಲಾಖೆ ಮತ ಕ್ಷೇತ್ರದಿಂದ ಉಮಾಶಂಕರ್ ಎ.ಎಸ್., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ ಮತ ಕ್ಷೇತ್ರದಿಂದ ಲಲಿತಾ ಎ.ಬಿ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಳಿದ ಸಿಬ್ಬಂದಿಗಳು ಮತ ಕ್ಷೇತ್ರದಿಂದ ಎರಡು ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾರ್ಯಪ್ಪ ಎ.ಯು, ಲಲಿತಾ ಪಿ.ಎ. ಅವರು ಸ್ಪರ್ಧಿಸಿ ಜಯಶೀಲರಾಗಿದ್ದಾರೆ.
ಕೃಷಿ ಇಲಾಖೆ ಮತ ಕ್ಷೇತ್ರದಿಂದ ಅಶ್ವಿನ್ ಕುಮಾರ್ ಹೆಚ್.ಬಿ., ಪಶುಪಾಲನಾ ಮತ್ತು ವೈದ್ಯ ಇಲಾಖೆ ಮತ ಕ್ಷೇತ್ರದಿಂದ ಸರ್ವರ್ ಪಾಷಾ, ಕಂದಾಯ ಇಲಾಖೆ ತಾಲೂಕು ಕಚೇರಿ ಮತ ಕ್ಷೇತ್ರದಿಂದ ಸೋಮಣ್ಣ ಕೆ.ಎಂ., ಕಂದಾಯ ಇಲಾಖೆ ಕ್ಷೇತ್ರ ಸಿಬ್ಬಂದಿಗಳು ಮತ ಕ್ಷೇತ್ರದಿಂದ ಹರೀಶ್ ಎಂ.ಎಲ್., ಲೋಕೋಪ ಯೋಗಿ ಇಲಾಖೆ, ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮತ ಕ್ಷೇತ್ರದಿಂದ ಸುಬ್ಬಯ್ಯ ಟಿ.ಪಿ., ಸರಕಾರಿ ಪ್ರಾಥಮಿಕ ಶಾಲೆಗಳು ಮತಕ್ಷೇತ್ರದಿಂದ ಸುರೇಂದ್ರ ಈ., ದೇವರಾಜ್ ಬಿ.ಟಿ., ರಮಾನಂದ ಟಿ.ಡಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಚೇರಿ ಮತ ಕ್ಷೇತ್ರದಿಂದ ಕುಶಾಲಪ್ಪ ಎಂ.ಎನ್., ಸರಕಾರಿ ಪದವಿಪೂರ್ವ ಕಾಲೇಜುಗಳು ಮತಕ್ಷೇತ್ರದಿಂದ ಚಾರ್ಲ್ಸ್ ಡಿಸೋಜ, ಪದವಿ ಕಾಲೇಜುಗಳು ಮತ ಕ್ಷೇತ್ರದಿಂದ ಡಾ. ದಯಾನಂದ ಕೆ.ಸಿ., ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಮತ ಕ್ಷೇತ್ರದಿಂದ ನಾಗರಾಜು ಹೆಚ್.ಸಿ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯಾಧಿ ಕಾರಿಗಳ ಕಚೇರಿ ಮತ ಕ್ಷೇತ್ರದಿಂದ ಶಶಿಕಾಂತ್ ಎಂ.ಪಿ., ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಮತ ಕ್ಷೇತ್ರದಿಂದ ಸಣ್ಣ ಜವರಯ್ಯ, ನ್ಯಾಯಾಂಗ ಇಲಾಖೆ ಮತಕ್ಷೇತ್ರದಿಂದ ಸ್ಟೀಫನ್ ಡಿಸೋಜ ಎಂ.ಎ., ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ತಾಲೂಕು ಪಂಚಾಯತ್ ಕಚೇರಿ ಮತ ಕ್ಷೇತ್ರದಿಂದ ಗುರುರಾಜ್ ಬಿ.ಎಸ್., ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಉಳಿದ ಸಿಬ್ಬಂದಿಗಳು ಮತ ಕ್ಷೇತ್ರದಿಂದ ತಿಮ್ಮಯ್ಯ ಕೆ.ಎಂ., ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆ ಮತ ಕ್ಷೇತ್ರದಿಂದ ಸಂತೋಷ್, ಇತರ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ ಕ್ಷೇತ್ರದಿಂದ ಬಸವರಾಜು ಎನ್.ಎಸ್. ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ವೀರಾಜಪೇಟೆ ತಾಲೂಕು ಶಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.