ಮಡಿಕೇರಿ, ಅ. ೩೦: ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಾಘೋಷಂ, ಓಣಂ ಸಧ್ಯ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್. ವಾಸುದೇವ ಆವರು; ನವೆಂಬರ್ ೧ರಂದು ಓಣಂ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಓಣಂ ಹಬ್ಬವನ್ನು ಮಲಯಾಳಿ ಬಾಂಧವರು ಸಾಮ್ರಾಟ ಮಹಾಬಲಿ ಚಕ್ರವರ್ತಿ, ವಾಮನನ (ಮಹಾವಿಷ್ಣು) ಅನುಮತಿ ಮೇರೆಗೆ ವರ್ಷಕ್ಕೊಮ್ಮೆ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಬರುವ ಕುರುಹಾಗಿ ಸಡಗರ ಸಂಭ್ರಮದಿAದ ಆಚರಿಸುತ್ತಾರೆ. ೧೦ ದಿನಗಳ ಕಾಲ ವಿಜೃಂಭಣೆಯಿAದ ಜರುಗುವ ಓಣಂ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ವಿವಿಧ ವಿನ್ಯಾಸದ ಪುಷ್ಪ ಚಿತ್ತಾರಗಳು(ಪೂಕಳಂ), ವಿವಿಧ ಬಗೆಯ ವಸ್ತçಗಳು, ಕೈಕೊಟ್ಟಿಕಳಿ, ತಿರುವಾದಿರ ಇವೆಲ್ಲಾ ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ ಎಂದು ತಿಳಿಸಿದರು.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಾವು ನೋವು ಸಂಭವಿಸಿದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸುವ ಸಲುವಾಗಿ ಈ ಬಾರಿ ಓಣಾಘೋಷಂ-ಓಣA ಸಧ್ಯ ಕಾರ್ಯಕ್ರಮದ ಮೆರವಣಿಗೆಯನ್ನು ಕೈ ಬಿಡಲಾಗಿದೆ. ಓಣಂ ಹಬ್ಬದ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿದೆ, ಓಣಾಘೋಷಂಗೂ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ
ಹಿಂದೂ ಮಲಯಾಳಿ ಸಂಘದ ಗೌರವ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ; ಪ್ರತಿ ವರ್ಷದಂತೆ ಈ ಬಾರಿ ಕೂಡ ಓಣಾಘೋಷಂನೊAದಿಗೆ ಕನ್ನಡ ರಾಜ್ಯೋತ್ಸವವನ್ನು ಕೂಡ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಪ್ರಯುಕ್ತ ಬೆಳಿಗ್ಗೆ ೯ಗಂಟೆಗೆ ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಕನ್ನಡ ಧ್ವಜಾರೋಹಣ ಮಾಡುವರು. ರಾಷ್ಟçಪತಿ ಪದಕ ಪುರಸ್ಕೃತ ನಿವೃತ್ತ ಪೊಲೀಸ್ ಅಧಿಕಾರಿ ಎಂ. ಅಚ್ಚುತ್ತನಾಯರ್ ರಾಷ್ಟç ಧ್ವಜಾರೋಹಣ ಮಾಡುವರು. ನಂತರ ವಿವಿಧ ಕಾರ್ಯಕ್ರಮಗಳೊಂದಿಗೆ ರಾಜ್ಯೋತ್ಸವ ನೃತ್ಯ ನಡೆಯಲಿದೆ. ಆನಂತರ ಛದ್ಮವೇಷ ಹಾಗೂ ಮಕ್ಕಳ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮ
ಬೆಳಿಗ್ಗೆ ೧೦.೩೦ ಗಂಟೆಗೆ ತಿರುವಾದಿರ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ವಿಧಾನ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಉದ್ಘಾಟಿಸುವರು. ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಮಾಜಿ ಸದಸ್ಯ ಕೆ.ಎಂ. ಗಣೇಶ್, ಹಿಂದೂ ಮಲಯಾಳಿ ಸಮಾಜ ಜಿಲ್ಲಾ ಅಧ್ಯಕ್ಷ ವಿ.ಎಂ. ವಿಜಯ, ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್. ವಾಸುದೇವ, ಹಿಂದೂ ಮಲಯಾಳಿ ಸಂಘದ ಗೌರವ ಅಧ್ಯಕ್ಷ ಕೆ.ಎಸ್. ರಮೇಶ್, ಮಾಜಿ ಸೈನಿಕರು, ಹಾಗೂ ಕಾವೇರಿ ಹಾಲ್ ವ್ಯವಸ್ಥಾಪಕ ಗಣೇಶ್ ಡಿ.ಹೆಚ್. ಉಪಸ್ಥಿತರಿರುವರು. ಹಿಂದೂ ಮಲಯಾಳಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ದಿನೇಶ್ ನಾಯರ್, ಖಜಾಂಚಿ ಎಂ.ಪಿ. ರವಿ, ಹಿಂದೂ ಮಲಯಾಳಿ ಸಂಘ ನಾಪೋಕ್ಲು ಘಟದ ಅಧ್ಯಕ್ಷ ಕೆ.ಕೆ. ಅನೀಲ್, ಮಡಿಕೇರಿ ಮಹಿಳಾ ಘಟಕದ ಅಧ್ಯಕ್ಷೆ ಲತಾರಾಜನ್, ಮಡಿಕೇರಿ ಯುವ ಘಟಕದ ಅಧ್ಯಕ್ಷ ಆರ್.ಅರವಿಂದ್ ಹಾಗೂ ಹತ್ತು ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ರಮೇಶ್ ತಿಳಿಸಿದರು. ಓಣಂ ಸಧ್ಯ ಮಧ್ಯಾಹ್ನ- ೧೨-೩೦ರಿಂದ ಆರಂಭಗೊಳ್ಳಲಿದ್ದು, ೨೦ ಬಗೆಯ ವಿವಿಧ ಖಾದ್ಯಗಳನ್ನು ತಯಾರಿಸಲಾಗುವದು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆಯಲಿದ್ದು, ಈಗಾಗಲೇ ಸುಮಾರು ೭೫ ತಂಡಗಳು ಹೆಸರು ನೋಂದಾಯಿಸಿಕೊAಡಿರುವದಾಗಿ ಮಾಹಿತಿ ನೀಡಿದರು.
ಸಮಾರೋಪ
ಸಂಜೆ ೪-೩೦ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮಗಳು ನಡೆಯಲಿದ್ದು, ವಾಸುದೇವ ಟಿ.ಆರ್. ಅಧ್ಯಕ್ಷತೆ ವಹಿಸಲಿದ್ದು, ಸಂಘದ ಉಪಾಧ್ಯಕ್ಷ ಸುದೀರ್ ಟಿ.ಕೆ, ಗುತ್ತಿಗೆದಾರರಾದ ಕೆ.ವಿ. ಸುಬ್ರಮಣಿ, ಸಿ.ಆರ್. ಜಯನ್, ಕೆ. ವಿನೋದ್ ನಾಯರ್ ಬೆಳೆಗಾರ ಸಿ.ಪಿ.ಪ್ರಮೋದ್, ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣ ಎನ್.ವಿ, ಉದ್ಯಮಿಗಳಾದ ಆರ್. ಗಿರೀಶ್, ಕೆ.ಎಂ. ಗಣೇಶ್, ಟಿ.ಆರ್ ಪಾಪಣ್ಣ, ಎ.ಎಸ್.ಐ ಜೋಶಿ ಕುಟ್ಟಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ ಮಾತನಾಡಿ; ಮಲಯಾಳಿ ಸಮುದಾಯದ ಆಚಾರ- ವಿಚಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸಮಾಜದ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ವರಿಗೂ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಕೂಡ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಎಸ್. ದಿನೇಶ್ ನಾಯರ್, ಸಂಚಾಲಕ ರವಿ ಅಪ್ಪುಕುಟ್ಟನ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜನ್ ಇದ್ದರು.