ಅ. ೨೨: ಕೊಡಗು ರೋಮನ್ ಕ್ಯಾಥೋಲಿಕ್ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದಲ್ಲಿ ನಡೆಯಿತು.

ಕುಶಾಲನಗರ ಮುಳ್ಳುಸೋಗೆ ತಪೋವನ ಗುರುಮಂದಿರದ ಸಭಾಂಗಣದಲ್ಲಿ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮ ಗುರುಗಳಾದ ಎಂ. ಮಾರ್ಟಿನ್ ಅವರು ಆಶೀರ್ವಚನ ನೀಡಿ ಮಾತನಾಡಿದರು.

ನೂತನ ಅಧ್ಯಕ್ಷರಾದ ಜಾನ್ಸನ್ ಪಿಂಟೋ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಆಶೀರ್ವಚನ ನೀಡಿ ಮಾತನಾಡಿದ ಧರ್ಮ ಗುರುಗಳಾದ ಎಂ ಮಾರ್ಟಿನ್ ಸಮಾಜದ ತಳಹಂತದ ಬಡ ಜನರಿಗೆ ಸಹಾಯ ಮಾಡುವುದು ಸಂಘಟನೆಯ ಉದ್ದೇಶವಾಗಬೇಕಾಗಿದೆ ಇತರರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಧರ್ಮ ಗುರುಗಳಾದ ಗಿಲ್ಬರ್ಟ್ ಡಿಸಿಲ್ವಾ ಅವರು ಮಾತನಾಡಿ ಪ್ರೀತಿಯಿಂದ ಎಲ್ಲರೂ ಬಾಳಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷರಾದ ಜಾನ್ಸನ್ ಮಾತನಾಡಿ ತಾನು ಪ್ರಾಮಾಣಿಕತೆಯಿಂದ ಎಲ್ಲರೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡಿ ಸಾರ್ವಜನಿಕರ ಒಳಿತಿಗಾಗಿ ಕಾರ್ಯಯೋಜನೆಗಳನ್ನು ರೂಪಿ ಸುವುದಾಗಿ ತಿಳಿಸಿದರು.

ಸಭೆಯಲ್ಲಿ ಧರ್ಮಗುರುಗಳಾದ ಪೀಟರ್ ದೇಶ ತಪೋವನ ಗುರುಮಂದಿರದ ಗುರುಗಳು ಜೋಸೆಫ್ ಡಿಸೋಜಾ ಮತ್ತು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನಿರ್ಗಮಿತ ಅಧ್ಯಕ್ಷರಾದ ಎಸ್‌ಎಂ ಡಿ ಸಿಲ್ವಾ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿ ಎಸ್ ಸಜಿ, ಫಿಲಿಪ್ ವಾಸ್, ಮಹಿಳಾ ಘಟಕದ ಜೆ ಫಿಲೋಮಿನಾ, ಸ್ಥಳೀಯ ಘಟಕಗಳ ಪ್ರಮುಖರು, ಸದಸ್ಯರುಗಳು ಇದ್ದರು.