ನಾಪೋಕ್ಲು, ಅ. ೨೨: ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದ ಬಾಂಧವರಿಗೆ ಹಾಗೂ ಭಕ್ತಾದಿಗಳಿಗೆ ಶ್ರೀ ಕಾವೇರಿ ಮಾತೆಯ ಪುಣ್ಯ ತೀರ್ಥ ವಿತರಣೆ ಮಾಡಲಾಯಿತು. ಈ ಸಂದರ್ಭ ಸಮಾಜದ ಸಭಾಂಗಣದಲ್ಲಿ ತೀರ್ಥವನ್ನು ದೇವರ ಮಂಟಪದಲ್ಲಿರಿಸಿ ಕಾವೇರಿ ತೀರ್ಥಕ್ಕೆ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ, ಪದಾಧಿಕಾರಿಗಳಾದ ಕುದುಪಜೆ ಚಂದ್ರಶೇಖರ್, ಪೊನ್ನೇಟಿ ನಂದ, ನಡುಮನೆ ಚಂಗಪ್ಪ, ನಡುವಟ್ಟಿರ ಲಕ್ಷö್ಮಣ, ನಿರ್ದೇಶಕರಾದ ಪಟ್ಟಡ ಶಿವಕುಮಾರ್, ಕೊಂಬಾರನ ಸುಬ್ಬಯ್ಯ, ಹೊಸೂರು ರಾಘವಯ್ಯ, ಕುಂಟುಪಣಿ ರಮೇಶ್, ಪಾಣತ್ತಲೆ ವಸಂತ, ತೋಟಂಬೈಲು ಇಂದಿರಾ, ಕುಂಟುಪುಣಿ ಶೀಲಾ, ಚಪ್ಪೇರಾ ಯಮುನಾ, ಸಮಾಜದ ಮಾಜಿ ಅಧ್ಯಕ್ಷ ತೊಟಂಬೈಲು ಮನೋಹರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ ಮೊದಲಾದವರು ಪಾಲ್ಗೊಂಡಿದ್ದರು.