ಚೆಟ್ಟಳ್ಳಿ, ಅ. ೨೨: ಚೆಟ್ಟಳ್ಳಿಯ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ೧೬ನೇ ವರ್ಷದ ಓಣಂ ಆಚರಣೆ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನೆರವೇರಿತು.

ಬೆಳಿಗ್ಗೆ ನಡೆದ ಮೆರವಣಿಗೆಯ ಉದ್ಘಾಟನೆಯನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಿಂಧೂರಾಜನ್, ಗೌರವ ಅಧ್ಯಕ್ಷರಾದ ಸಿ.ಎಸ್. ಕುಟ್ಟನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಮಕ್ಕಳು ಹಾಗೂ ಮಹಿಳೆಯರು ದೀಪ ಜ್ಯೋತಿ ಬೆಳಗುವ ಮೂಲಕ ನೆರವೇರಿಸಿದರು.

ನಂತರ ಚಂಡೆವಾದ್ಯ ಮಾವೇಲಿಯೊಂದಿಗೆ ಮೆರವಣಿಗೆ ಮಂಗಳ ಸಭಾಂಗಣದಿAದ ಹೊರಟು ಚೆಟ್ಟಳ್ಳಿ ಪಟ್ಟಣಕ್ಕೆ ತೆರಳಿ ಪ್ರೌಢಶಾಲಾ ಮೈದಾನದಲ್ಲಿ ಕೊನೆಗೊಂಡಿತು. ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನೆರವೇರಿದವು. ನಂತರ ಓಣಂ ಸಧ್ಯ ಸವಿಯಲಾಯಿತು.

ಕಾರ್ಯಕ್ರಮದ ಅಂಗವಾಗಿ ಸಮಾಜದ ಸದಸ್ಯರಾದ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೆ ವಿವಿಧ ಪ್ರಶಸ್ತಿಗೆ ಭಾಜನರಾದ ಸುನಿಲ್ ಕುಮಾರ್, ೨೫ ವರ್ಷಗಳ ನಂತರ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಗೃಹಿಣಿ ಬೇಬಿರಾಣಿ ಹಾಗೂ ವಿಶೇಷಚೇತನನಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕಗಳೊAದಿಗೆ ಉತ್ತೀರ್ಣನಾಗಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಆದಿಲ್ ಪ್ರದೀಪ್ ಇವರುಗಳನ್ನು ಸನ್ಮಾನಿಸಲಾಯಿತು. ಪಿಯುಸಿಯಲ್ಲಿ ಅತ್ಯುತ್ತಮ ಅಂಕಪಡೆದ ಸಾನಿಧ್ಯ ಉಮೇಶ್ ಹಾಗು ರಿನಿಶಾ ಸುರೇಂದ್ರನ್ ಇವರನ್ನು ಗೌರವಿಸಲಾಯಿತು. ಸಮಾಜದ ಮಹಿಳಾ ತಂಡದಿAದ ಕೇರಳದ ತಿರುವಾದಿರ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.