ಅ. ೨೨: ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘ ಮತ್ತು ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘ ಮಡಿಕೆ ಬೀಡು ಇದರ ಆಶ್ರಯದಲ್ಲಿ ಮಡಿಕೆಬೀಡುವಿನಲ್ಲಿ ಕುಲಾಲ ಕುಂಬಾರರ ಸಮಾವೇಶ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿAದ ನಡೆಯಿತು.

ಬಸವೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ಗಣ್ಯರನ್ನು ಕುಂಭ ಕಲಶದೊಂದಿಗೆ ಮೆರವಣಿಗೆಯಲ್ಲಿ ಸಮುದಾಯ ಭವನಕ್ಕೆ ಸ್ವಾಗತಿಸಲಾಯಿತು. ಮಣ್ಣಿನ ಮಡಿಕೆ ಮಾಡುವ ಚಿಗರಿ ಯಂತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ವಿಶೇಷವಾಗಿ ಉದ್ಘಾಟಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕರಾದ ರಮೇಶ್ ಮಡಿಕೆ ಬೀಡು. ಕುಲಾಲ ಕುಂಬಾರರು ಹೇಗೆ ಸಂಘಟಿತರಾಗಬೇಕು ಮತ್ತು ಇದರ ಔಚಿತ್ಯವೇನು ಮುಂದೆ ಸಂಘದ ಕಾರ್ಯವೈಖರಿ ಯಾವ ರೀತಿ ಇರುತ್ತದೆ ಎಂದು ಸಭೆಗೆ ವಿವರಿಸಿದರು.

ನಂತರ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಇವರು, ನಮ್ಮ ಜನಾಂಗವು ಸಂಘಟನೆಯಾದಾಗ ಮಾತ್ರ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯ ಆ ಮೂಲಕ ನಾವೆಲ್ಲ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ನಂತರ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಯುವ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಕುಲಾಲ್ ಮುರ್ನಾಡು ಅವರು, ಜಿಲ್ಲೆಯ ಪ್ರತಿಯೊಬ್ಬರು ಸಂಘದ ಸದಸ್ಯತನ ತೆಗೆದುಕೊಳ್ಳುವ ಮೂಲಕ ಸಂಘವನ್ನು ಬೆಳೆಸಬೇಕಾಗಿದೆ. ಪರಸ್ಪರ ಪ್ರೀತಿ ವಿಶ್ವಾಸ ತುಂಬಿದಾಗ ಮಾತ್ರ ಸಂಘವು ಬೆಳೆಯುತ್ತದೆ ಜನಾಂಗವು ಅಭಿವೃದ್ಧಿಯಾಗುತ್ತದೆ. ಸಂಘದ ಮೂಲಕ ಕುಲಾಲ ಕುಂಬಾರ ಸಮುದಾಯದ ಜನ ಗಣತಿ ಕಾರ್ಯಕ್ರಮಕ್ಕೂ ಎಲ್ಲರೂ ಸಹಕರಿಸಬೇಕು ಎಂದರು.

ಮತ್ತೊಬ್ಬ ಅತಿಥಿ, ಕೊಡಗು ಜಿಲ್ಲಾ, ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಕುಶಾಲಪ್ಪ .ಕೆ ಅವರು ಜಿಲ್ಲಾ ಸಂಘದ ಮುಂದಿನ ಧ್ಯೇಯೋದ್ದೇಶವನ್ನು ಈಡೇರಿಸಲು ಜಿಲ್ಲೆಯ ಜನಾಂಗವು ಸಹಕರಿಸಬೇಕಾಗಿದೆ. ಆ ಮೂಲಕ ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಕಷ್ಟಕಾರ್ಪಣ್ಯಕ್ಕೆ ನೆರವಾಗಲು ಸಂಘ ಸನ್ನದ್ಧವಾಗಿದೆ. ಸಂಘದ ಮುಂದಿನ ಯೋಜನೆಗಳನ್ನು ಸಭೆಗೆ ವಿವರಿಸಿದರು. ಮತ್ತು ಕುಲಾಲ ಕುಂಬಾರ ಸಮಾವೇಶವನ್ನು ಆಯೋಜನೆಗೊಳಿಸಿದ ಮಡಿಕೆಬೀಡುವಿನ ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಪದಾಧಿಕಾರಿಗಳನ್ನು ಈ ಸುಸಂದರ್ಭದಲ್ಲಿ ಶ್ಲಾಘಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ ಏ.ಓ. ಶಿವ ಇವರು ಮಡಕೆಬೀಡುವಿನ ಕುಲಬಾಂಧವರಿAದ ಜಿಲ್ಲಾ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಮಡಿಕೆಬೀಡುನಲ್ಲಿ ಇಂಥ ಕಾರ್ಯಕ್ರಮಗಳನ್ನು ವರ್ಷಂಪ್ರತಿ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ತಿಳಿಸಿದರು ಮತ್ತು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಮಡಕೆಬಿಡುವಿನ ಕುಲಬಾಂಧವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಹಿರಿಯರಾದ ಶ್ರೀ ವಿಠಲ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುಮಿತ್ರ ಹಾಗೂ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಖಜಾಂಚಿ ಗಿರೀಶ್ ಮಡಿಕೆಬೀಡು ಉಪಸ್ಥಿತರಿದ್ದರು. ಮಡಿಕೆ ಬೀಡುವಿನ ಬಾಂಧವರು ಅಲ್ಲದೆ ಜಿಲ್ಲೆಯ ಇತರೆಡೆಗಳಿಂದ ಬಾಂಧವರು ಆಗಮಿಸಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀ ಶಾಂತಕುಮಾರ್ ಮಡಿಕೆಬೀಡು ನಿರೂಪಿಸಿದರು. ಸಿ. ಅಶ್ವತ್ ಮಡಿಕೆಬೀಡು ಸ್ವಾಗತಿಸಿದರು, ಚೇತನ, ವರ್ಷ, ಮೋನಿಷ, ಸಹನ, ಕಾರುಣ್ಯ, ಲೇಖನ, ಇವರು ಪ್ರಾರ್ಥಿಸಿದರು. ನಂತರ ಅಚ್ಚುಕಟ್ಟಾದ ಊಟ ಉಪಚಾರದೊಂದಿಗೆ ಸಮಾವೇಶವು ಸಂಪನ್ನಗೊAಡಿತು.