ವೀರಾಜಪೇಟೆ, ಅ. ೨೨: ಸಮೀಪದ ಐಮಂಗಲ ಗ್ರಾಮದ ಕುಂಡ್ರAಡ ಸಿ. ಪೊನ್ನಪ್ಪ ಅವರ ಭತ್ತದ ಗದ್ದೆಗೆ ಕಾಡಾನೆಗಳು ದಾಳಿ ನಡೆಸಿ ಫಸಲಿಗೆ ಬಂದ ಭತ್ತದ ಬೆಳೆಯನ್ನು ನಷ್ಟಮಾಡಿವೆ. ನಂತರ ಅವರದ್ದೆ ಕಾಫಿ ತೋಟಕ್ಕೂ ದಾಳಿ ಮಾಡಿ ಅಡಿಕೆ ಗಿಡ, ಬಾಳೆ, ಫಸಲು ಬಂದಿದ್ದ ಕಾಫಿ ಗಿಡಗಳನ್ನು ಮುರಿದು ನಷ್ಟ ಸಂಭವಿಸಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಂಡು ಆನೆಗಳನ್ನು ಕಾಡಿಗೆ ಅಟ್ಟಬೇಕು. ನಷ್ಟ ಆಗಿರುವುದಕ್ಕೆ ತಕ್ಷಣ ಪರಿಹಾರ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಕಳೆದ ೧೫ ದಿನಗಳಿಂದಲೂ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಕಾಡಾನೆಗಳ ಅಟ್ಟಹಾಸದಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.