ಅಕ್ಟೋಬರ್ ಬಂತೆAದರೆ ದೇಶಾದ್ಯಂತ ಹಬ್ಬಗಳ ಸಂಭ್ರಮವೋ ಸಂಭ್ರಮ, ಮಹಾಲಯ ಅಮವಾಸೆ, ನವದುರ್ಗಿಯರ ಪೂಜೆ, ಆಯುಧ ಪೂಜೆ, ವಿಜಯದಶಮಿ ಸೇರಿದಂತೆ ಸಾಲುಸಾಲು ಹಬ್ಬಗಳ ಸಂಭ್ರಮ ಭಾರತೀಯರಿಗೆ ಒಂದೆಡೆಯಾದರೆ, ಕೆಲವು ಸಂಘ-ಸAಸ್ಥೆಗಳಿಗೆ ಶತಮಾನೋತ್ಸವ ಸಂಭ್ರಮ ಮತ್ತೊಂದೆಡೆ.

ಇಡಿ ದೇಶವೇ ಪರಕಿಯರ ವಶದಲ್ಲಿದ್ದು ನಮ್ಮ ಪೂರ್ವಿಕರನ್ನು ಗುಲಾಮರಂತೆ ಕಾಣುತ್ತಿದ್ದ ಸೂರ್ಯ ಮುಳುಗದ ದೇಶದವರೆಂದು ಅಹಂಕಾರದಲ್ಲಿ ಬೀಗುತ್ತಿದ್ದ ಬ್ರಿಟೀಷ್ ಸಾಮ್ರಾಜ್ಯದ ಐಸೀಸ್ ಅಧಿಕಾರಿ ಜಾನ್ ಥ್ಯಾಕರೆ ಕಲೆ ಕಡಿದು ಊರ ಹೆಬ್ಬಾಗಿಲಿಗೆ ಕಟ್ಟಿ ಭಾರತದ ನಾರಿಶಕ್ತಿಯನ್ನು ಪ್ರದರ್ಶಿಸಿದ ದಿನ ೧೮೨೪ ಅಕ್ಟೋಬರ್ ತಿಂಗಳ ೨೩ಕ್ಕೆ ೨೦೦ ವರ್ಷಗಳಾಗಲಿವೆ.

ಕಾಕತಾಳಿಯ ಎಂಬAತೆ ರಾಕ್ಷಸನ ಸಂಹಾರ ಮಾಡಿದ ನವದುರ್ಗಿಯರ ಹಬ್ಬಗಳು ಬರುವ ಅಕ್ಟೋಬರ್ ತಿಂಗಳಲ್ಲೇ (೧೭೭೮ ಅಕ್ಟೋಬರ್ ೨೩ರಲ್ಲಿ) ಜನಿಸಿದ ಅಂದಿನ ಅಖಂಡ ಧಾರಾವಾಡದ (ಇಂದಿನ ಬೆಳಗಾವಿ ಜಿಲ್ಲೆಯ) ಕಾಕತಿ ಎಂಬ ಕಾಡಂಚಿನ ಗ್ರಾಮದ ದೂಳಪ್ಪ ಗೌಡರ ಮಗಳು ಚೆನ್ನಮ್ಮ ಮುಗ್ಧ ಭಾರತೀಯರಿಗೆ ಹಿಂಸೆ ಕೊಡುತ್ತಿದ್ದ ಆಂಗ್ಲರ ವಿರುದ್ಧ ಯುದ್ಧ ಸಾರಿದ ಭಾರತದ ಮೊದಲ ಮಹಿಳೆ.

ರಾಜವಂಶಸ್ಥಳು ಅಲ್ಲ, ಶ್ರೀಮಂತನ ಮಗಳು ಅಲ್ಲ, ತನ್ನ ಸ್ವತಃ ಬುದ್ದಿ ಚಟುವಟಿಕೆಯಿಂದಲೇ ಸಕಲ ವಿದ್ಯೆಗಳನ್ನು ಕರಗತಮಾಡಿಕೊಂಡಿದ್ದ ಈ ಸುಂದರ ಚತುರತೆಯನ್ನು ನೋಡಿ ಮನಸೋತ ಕಿತ್ತೂರಿನ ಸಂಸ್ಥಾನದ ರಾಜನಾದ ಮಲ್ಲಸರ್ಜ ದೇಸಾಯಿ ಸ್ನೇಹಕ್ಕೆ ಒಲಿದು ಆತನ ಹೆಂಡತಿ ರುದ್ರಮ್ಮನ ಒಪ್ಪಿಗೆಯನ್ನು ಪಡೆದು ಕಿತ್ತೂರಿಗೆ ೨ನೇ ರಾಣಿಯಾಗಿ ಬರುವ ಕಾಕತೀಯ ಚೆನ್ನಮ್ಮ ತನ್ನ ಪತಿ ಹಾಗೂ ರಾಜನ ಮೊದಲ ಸತಿ ರುದ್ರಮ್ಮನು ಅನಾರೋಗ್ಯದಿಂದ ತೀರಿಕೊಂಡ ನಂತರ ಆತನ ಮಗ ಶಿವಲಿಂಗರುದ್ರಸರ್ಜನಿಗೆ ಪಟ್ಟಕಟ್ಟುವ ಮುಖಾಂತರ ಹೃದಯ ಶ್ರೀಮಂತಿಗೆ ಮೆರೆದ ಮಹಾತಾಯಿ ಚೆನ್ನಮ್ಮ.

ದೇಶದಲ್ಲಿ ೧೮೧೮ ರಲ್ಲಿ ಪೇಶ್ವೆ ಹುದ್ದೆ ರದ್ದಾಗಿ ಮುಂಡ್ರೊ ಒಪ್ಪಂದದAತೆ ಬ್ರಿಟೀಷರಿಗೆ ಕಪ್ಪಹಣಕೊಟ್ಟು ರಾಜ್ಯಬಾರ ಮಾಡುತ್ತಿದ್ದ ಸಂಸ್ಥಾನಗಳ ನೀತಿಯನ್ನು ವಿರೋಧಿಸಿದ ಕಿತ್ತೂರ ಚೆನ್ನಮ್ಮ, ನಮ್ಮ ದೇಶಕ್ಕೆ ಬಂದ ಪರಕೀಯರಿಗೆ ನಾವೇಕೆ ಕಪ್ಪ ಕೊಡಬೇಕೆಂದು ವಿರೋಧಿಸಿ ಆ ನೀತಿ ನಿಲ್ಲಿಸಿದಳು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಮಗನು ತೀರಿಕೊಂಡನAತರ ದತ್ತುಪುತ್ರನನ್ನು ಪಡೆದು ರಾಜ್ಯವನ್ನು ಮುನ್ನಡೆಸಿದನ್ನು ಆಂಗ್ಲರ ಲಾರ್ಡ್ ವೆಲ್ಲೆಸ್ಲಿಯು ವಿರೋಧಿಸುತ್ತಿದ್ದನು. ಈ ಸಂಪದ್ಭರಿತ ಸಂಸ್ಥಾನವನ್ನು ನಮ್ಮ ಥೆಕ್ಕೆಗೆ ಸಂಪೂರ್ಣವಾಗಿ ಪಡೆದುಕೊಳ್ಳಬೇಕೆಂಬ ಬ್ರಿಟೀಷರ ದುರಾಸೆಗೆ ಸಹಕರಿಸುತ್ತಿದ್ದವರು ನಮ್ಮವರೇ ಎಂಬುದಕ್ಕೆ ಬೇಸರವಾಗುತ್ತಿದೆ. ಚೆನ್ನಮ್ಮನ ಆಡಳಿತದಲ್ಲೇ ಸೇವಕರಾಗಿದ್ದ ಮಲ್ಲಶೆಟ್ಟಿ ಮತ್ತು ವೆಂಕಪ್ಪರಾವ್ ಎಂಬುವವರ ಕುತಂತ್ರದಿAದ ಕಿತ್ತೂರಿನ ಮೇಲೆ ಮೇಲಿಂದ ಮೇಲೆ ಹೋರಾಟ ನಡೆಯುತ್ತಲೇ ಇರುತ್ತದೆ. ೧೮೨೪ರ ಅಕ್ಟೋಬರ್ ೨೩ ರಂದು ಚೆನ್ನಮ್ಮನ ಹುಟ್ಟುಹಬ್ಬದ ದಿನದಂದೇ ನಡೆದ ಕಿತ್ತೂರು ಹೋರಾಟದಲ್ಲಿ ಚೆನ್ನಮ್ಮನೇ ಹೋರಾಟದ ನೇತೃತ್ವವನ್ನು ವಹಿಸಿದ್ದಳು.

ಆಂಗ್ಲರ ಐಸೀಸ್ ಅಧಿಕಾರಿ ಜಾನ್ ಥ್ಯಾಕರೆ ಕಿತ್ತೂರು ಸೇನೆಯ ಅಮಟೂರು ಬಾಳಪ್ಪನ ಗುಂಡಿಗೆ ಬಲಿಯಾಗುತ್ತಿದ್ದಂತೆ ಬ್ರಿಟೀಷರ ಸೇನೆ ಓಡಿಹೋಗುವುದರ ಮುಖಾಂತರ ಇಡೀ ದೇಶದಲ್ಲೇ ಬ್ರಿಟೀಷರ ವಿರುದ್ಧ ಮೊದಲ ಜಯ ಅದರಲ್ಲೂ ಕನ್ನಡ ನಾಡಿನಲ್ಲಿ ಆಗಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಆಗಿದೆ.

ಆದರೆ ಇದಾದ ಎರಡೇ ತಿಂಗಳಲ್ಲಿ (೧೮೨೪ ಡಿಸೆಂಬರ್) ಹೋರಾಟ ಚುಕ್ಕಾಣಿ ಹಿಡಿದ ಜಾನ್ ಜಾಕ್ಸಿನನ ಕುತಂತ್ರಕ್ಕೆ ಮನ್ನಣೆ ಕೊಟ್ಟ ಕಿತ್ತೂರಿನ ಕೋಟೆ ಕಾವಲುಗಾರ ಶಿವಬಸಪ್ಪನೇ ಹಣದ ಆಸೆಗೆ ಕಿತ್ತೂರಿನ ಕೋಟೆಯ ಮದ್ದುಗುಂಡುವಿನ ಉಗ್ರಾಣಕ್ಕೆ ಸಗಣಿ ಮತ್ತು ಹಿಟ್ಟಿನ ನೀರನ್ನು ತುಂಬಿಸುವ ಮುಖಾಂತರ ಯುದ್ಧ ಶಸ್ತಾçಸ್ತçಗಳನ್ನು ನಿಷ್ಕಿçಯಗೊಳಿಸುವ ದೇಶದ್ರೋಹಿ ಕೆಲಸ ಮಾಡಿರುವುದರಿಂದ ಕಿತ್ತೂರು ಸೇನೆಗೆ ಸೋಲಾಗುತ್ತದೆ.

ಅಷ್ಟೇ ಏಕೆ ಮೊದಲಿಂದಲೂ ಹಣ ಹಾಗೂ ಅಧಿಕಾರದ ಆಸೆಗೆ ಪರದಾಡುತ್ತಿದ್ದ ಮಲ್ಲಶೆಟ್ಟಿ ಮತ್ತು ವೆಂಕಪ್ಪರಾವ್ ಈ ಇಬ್ಬರು ದೇಶದ್ರೋಹಿಗಳು ಚೆನ್ನಮ್ಮರವರನ್ನು ಬ್ರಿಟೀಷರಿಗೆ ಹಿಡಿದುಕೊಟ್ಟು ನೀಚ ಕೆಲಸ ಮಾಡುತ್ತಾರೆ.

ಏನೇ ಆಗಲಿ, ಬ್ರಿಟೀಷರಿಂದ ನಲುಗುತ್ತಿದ್ದ ಭಾರತದ ಸ್ವಾತ್ರಂತ್ರ‍್ಯ ಮೊದಲ ಯುದ್ಧದ ಜಯಕ್ಕೆ ಕಾರಣರಾದ ಅಂದಿನ ವೀರ ಪರಾಕ್ರಮಿಗಳು ಅಮಟೂರು ಬಾಳಪ್ಪ, ಸರದಾರ್ ಔರಾದ್ ವೀರಪ್ಪ, ಬಿಚ್ಚುಗತ್ತಿ ಚೆನ್ನಬಸಪ್ಪ, ಕುರುಸಿದ್ದಪ್ಪ ಹಾಗೂ ವಿಶೇಷವಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ನಿದ್ರೆಗೆಡಿಸಿದ್ದ ಸಂಗೋಳ್ಳಿ ರಾಯಣ್ಣರವರನ್ನು ಇಂದು ಸ್ಮರಿಸಿಕೊಳ್ಳಲೇಬೇಕಾಗಿದೆ.

ಒಟ್ಟಿನಲ್ಲಿ ಅಕ್ಟೋಬರ್ ತಿಂಗಳು ಭಾರತೀಯರಿಗೆ ಹಾಗೂ ವಿಶೇಷವಾಗಿ ನಮ್ಮ ದೇಶದ ಎಲ್ಲಾ ಮಹಿಳೆಯರಿಗೆ ಶೌರ್ಯದಿನವೆಂದೇ ಆಚರಿಸಲು ಶಕ್ತಿ ಪ್ರೇರಣೆಯಾಗಿದ್ದ ಕಿತ್ತೂರು ಚೆನ್ನಮ್ಮನಿಗೆ ನಮನ.

- ಲೋಕೇಶ್ ಸಾಗರ್, ಕುಶಾಲನಗರ.