ಮಡಿಕೇರಿ, ಅ. ೨೨: ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದಿAದ ಬಡಜೀವಕ್ಕೊಂದು ಆಸರೆಯಾಗೋಣ ಅಭಿಯಾನದಡಿಯಲ್ಲಿ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದವರಾಗಿದ್ದು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಚಾಲಕ ಗಣೇಶ ಕುಲಾಲ ಅವರಿಗೆ ಧಾನಿಗಳಿಂದ ಸಂಗ್ರಹಗೊAಡ ಹಣವನ್ನು ಇಂದು ವಿತರಿಸಲಾಯಿತು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಕುಶಾಲಪ್ಪ ಕೆ., ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಪದಾಧಿಕಾರಿಗಳಾದ ಸುರೇಶ್ ಕುಲಾಲ್, ಎ.ಎ. ಚೇತನ ಕುಲಾಲ್, ತೇಜಸ್ ಕುಲಾಲ್ ಹೊದ್ದೂರು, ಚಂದ್ರಶೇಖರ್ ಕುಲಾಲ್ ಮೂರ್ನಾಡು, ರವಿಕುಲಾಲ್, ವಿಶ್ವನಾಥ ಕುಲಾಲ್, ತನ್ಮಯ್ ಕುಲಾಲ್, ಧ್ಯಾನಿಕ್ ಕುಲಾಲ್, ಗಣೇಶ್ ಅವರ ಪತ್ನಿ ಹರಿಣಾಕ್ಷಿ ಮತ್ತಿತರರು ಈ ಸಂದರ್ಭ ಹಾಜರಿದ್ದರು.