ಮಡಿಕೇರಿ, ಅ. ೨೨: ಮಾರ್ನಿಂಗ್ ಸ್ಟಾರ್ ತಂಡದ ವತಿಯಿಂದ ೨೦೨೪ನೇ ಸಾಲಿನಲ್ಲಿ ಭಾರತೀಯ ಸೇನೆಯ ಅಗ್ನಿವೀರ್ರಾಗಿ ಆಯ್ಕೆಯಾದ ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ಕು ಜನ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.
ಮಾರ್ನಿಂಗ್ ಸ್ಟಾರ್ ತಂಡವು ಕಳೆದ ಮೂರು ವರ್ಷಗಳಿಂದ ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ಆಯ್ಕೆಯಾಗಲು ತರಬೇತಿಯನ್ನು ನೀಡುತ್ತಾ ಬಂದಿದ್ದು ಮೂರು ವರ್ಷಗಳಿಂದಲೂ ಆಯ್ಕೆಯಾದ ಅಭ್ಯರ್ಥಿಗಳನ್ನು ಮಾರ್ನಿಂಗ್ ಸ್ಟಾರ್ ತಂಡದ ವತಿಯಿಂದ ಗೌರವಿಸಿ ಸನ್ಮಾನಿಸಿ ಕಳುಹಿಸಿಕೊಡಲಾಗುತ್ತಿದೆ ಅದರಂತೆ ಈ ವರ್ಷದಲ್ಲೂ ಕೂಡ ನಾಲ್ಕು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮದನ್ ಸೋಮವಾರಪೇಟೆ, ಪ್ರಜ್ವಲ್ ಮಡಿಕೇರಿ, ಗುಣಶೇಖರ್ ಮಡಿಕೇರಿ ಮತ್ತು ನಾಣಯ್ಯ ಮಾದಾಪುರ ಇವರನ್ನು ಮಾರ್ನಿಂಗ್ ಸ್ಟಾರ್ ತಂಡದಿAದ ಅಭಿನಂದಿಸಿ ಸನ್ಮಾನಿಸಲಾಯಿತು.
ಮಾವಳ್ಳಿ ಬಿರಿಯಾನಿ ರೆಸ್ಟೋರೆಂಟ್ನಲ್ಲಿ ರವೀಂದ್ರ ರೈ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆದು ಕಾರ್ಯಕ್ರಮದಲ್ಲಿ ಮಾರ್ನಿಂಗ್ ಸ್ಟಾರ್ ಸದಸ್ಯರಾದ ಯೋಗೇಶ್, ವಿಜಯ್, ಕಪಿಲ್, ಶರತ್, ಶಿಲ್ಪ, ಉಷಾ, ಸುವಿಕ್ಷಾ, ಸುರೇಶ್ ರೈ, ಸುಬ್ರಹ್ಮಣ್ಯ, ಮಧು, ಸುರೇಶ್, ಭಾಗವಹಿಸಿದ್ದರು.