ಮಡಿಕೇರಿ, ಅ. ೨೨: ಮೈಸೂರು ವಿಭಾಗಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಹಾಕಿ ಪಂದ್ಯವು ಪೊನ್ನಂಪೇಟೆ ಟೂರ್ನಿ ಮೈದಾನದಲ್ಲಿ ತಾ. ೨೪ರಂದು ಅಪರಾಹ್ನ ೨ ಗಂಟೆಗೆ ಉದ್ಘಾಟನೆಗೊಳ್ಳಲಿದ್ದು ಹಾಸನ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ತಂಡಗಳು ಭಾಗವಹಿಸಲಿದ್ದು ತಾ. ೨೫ರಂದು ಸಂಜೆ ಹೊತ್ತಿಗೆ ಎಲ್ಲಾ ವರ್ಗಗಳ ಫೈನಲ್ ಪಂದ್ಯಗಳು ನಡೆಯಲಿದ್ದು, ಇಲ್ಲಿ ಗೆದ್ದ ತಂಡಗಳು ತಾ. ೨೭ ರಿಂದ ೩೦ರವರಗೆ ಪೊನ್ನಂಪೇಟೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಹಾಕಿ ಪಂದ್ಯಾಟದಲ್ಲಿ ಮೈಸೂರು
ಪೊನ್ನಂಪೇಟೆಯಲ್ಲಿ ವಿಭಾಗ ಮಟ್ಟದ ಹಾಕಿ ಪಂದ್ಯಾಟ
(ಮೊದಲ ಪುಟದಿಂದ) ವಿಭಾಗವನ್ನು ಪ್ರತಿನಿಧಿಸಲಿವೆ, ಎಲ್ಲಾ ಕ್ರೀಡಾಪಟುಗಳಿಗೆ ವೈದ್ಯಕೀಯ, ಊಟೊಪಚಾರ, ಸಾರಿಗೆ ವ್ಯವಸ್ಥೆಯೊಂದಿಗೆ ಸ್ಥಳೀಯ ಸಂತ ಅಂತೋಣಿ ಪ್ರೌಢ ಮತ್ತು ಪ್ರಾಥಮಿಕ ಶಾಲೆ, ಅಪ್ಪಚ್ಚುಕವಿ ವಿದ್ಯಾಲಯ, ಸಾಯಿಶಂಕರ್ ವಿದ್ಯಾಸಂಸ್ಥೆ, ಸರ್ವದೈವತಾ ವಿದ್ಯಾಸಂಸ್ಥೆ, ಕೆಪಿಎಸ್ ಸರ್ಕಾರಿ ವಿದ್ಯಾಸಂಸ್ಥೆಯಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕ್ರೀಡಾಕೂಟದ ಪ್ರಧಾನ ಸಂಚಾಲಕ ಮಾದಂಡ ತಿಮ್ಮಯ್ಯ ಮತ್ತು ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗದಾಮಪ್ಪ ತಿಳಿಸಿದ್ದಾರೆ.