ನ.೩ ರಂದು ಒಳಾಂಗಣ ಕ್ರೀಡಾಕೂಟ

ಮಡಿಕೇರಿ, ಅ. ೨೩: ಕೊಡಗು ಪತ್ರಿಕಾ ಭವನ ಟ್ರಸ್ಟ್ನ ೨೩ನೇ ವಾರ್ಷಿಕೋತ್ಸವ ನ.೮ ರಂದು ನಡೆಯಲಿದ್ದು, ಇದರ ಪ್ರಯುಕ್ತ ನವೆಂಬರ್ ೩ ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗೆ ಒಳಾಂಗಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ ಸಿಂಗಲ್ಸ್ ಮತ್ತು ಡಬಲ್ಸ್, ಕೇರಂ ಸಿಂಗಲ್ಸ್, ಡಬಲ್ಸ್ ಮತ್ತು ಚೆಸ್ ಪಂದ್ಯಾವಳಿ ನಡೆಯಲಿದೆ. ಚೆಸ್ ಪಂದ್ಯಾವಳಿಯನ್ನು ೧೫ ವರ್ಷ ವಯೋಮಿತಿಯ ಒಳಗಿನ ಮತ್ತು ಅದಕ್ಕೆ ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ನಡೆಸಲಾಗುತ್ತದೆ. ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರು ಚೆಸ್ ಬೋರ್ಡ್ ತರಬೇಕು. ಟಿಟಿ, ಕೇರಂ, ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರು ವ್ಯವಸ್ಥಾಪಕರು, ಪತ್ರಿಕಾ ಭವನ ಮೊ.೮೯೭೦೫೬೫೮೫೬ ಇವರನ್ನು ಸಂಪರ್ಕಿಸಬಹುದು.