ಕೂಡಿಗೆ, ಅ. ೨೨: ಟೀಂ ವೀರ ಹನುಮ ಸೇವಾ ಸಮಿತಿ ಇವರ ವತಿಯಿಂದ ಅತ್ತೂರು, ಹಾರಂಗಿ, ಯಡವನಾಡು, ಹುದುಗೂರು ದೊಡ್ಡತ್ತೂರು, ಚಿಕ್ಕತ್ತೂರು, ಸುಂದರನಗರ ಗ್ರಾಮಗಳು ಸೇರಿ ಹನುಮ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಲಾಗಿದೆ. ಚಿಕ್ಕತ್ತೂರು ಸೇರಿದಂತೆ ಉಪ ಗ್ರಾಮದ ಸಭೆಯ ಅಧ್ಯಕ್ಷತೆಯನ್ನು ಸಮಿತಿಯು ಅಧ್ಯಕ್ಷರಾದ ಭಾಸ್ಕರ್ ನಾಯಕ್ ವಹಿಸಿದ್ದರು ಎಲ್ಲಾ ಗ್ರಾಮದ ಪದಾಧಿಕಾರಿಗಳು ಭಾಗವಹಿಸಿದ್ದರು. ಇವರ ಜೊತೆಯಲ್ಲಿ ಊರಿನ ಹಿರಿಯರಾದ ಪುಟ್ಟಣ್ಣಯ್ಯ, ಕೋರೆ ನಾಗಣ್ಣ, ರುಕ್ಕಣ್ಣ, ಹಾರಂಗಿ ಮಣಿಕಂಠ, ಅತ್ತೂರು ಮಣಿಯಣ್ಣ, ಮಲ್ಲಪ್ಪಣ್ಣ, ರಮೇಶ್, ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷ ಟಿ.ಎಂ.ಚಾಮಿ ಭಾಗವಹಿಸಿದ್ದರು.