ಮಡಿಕೇರಿ, ಅ. ೨೨: ಟಿ. ಶೆಟ್ಟಿಗೇರಿಯ ರೂಟ್ಸ್ ವಿದ್ಯಾ ಸಂಸ್ಥೆಯ ವಿಧ್ಯಾರ್ಥಿನಿ ಸನಾ ರಾಘವನ್ ಬಾಲಕಿಯರ ೧೪ ವರ್ಷದ ವಯೋಮಿತಿಯ ವಿಭಾಗದ ಜಿಲ್ಲಾ ಮಟ್ಟದ ಚೆಸ್ ಆಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪ್ರೌಢಶಾಲಾ ವಿಭಾಗದ ಬಾಲಕರ ಜಾವೆಲಿನ್ ಎಸೆತದಲ್ಲಿ ಗಾಯಕ್ ಪೊನ್ನಣ್ಣ ಹಾಗೂ ಬಾಲಕಿಯರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ವಂಶಿ ಕಾವೇರಮ್ಮ ಕೆ.ಟಿ. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.