ಚೆಯ್ಯಂಡಾಣೆ, ಅ. ೨೨: ಎಮ್ಮೆಮಾಡುವಿನಲ್ಲಿ ಸುನ್ನಿ ಸಂಘಟನೆಗಳಾದ ಎಸ್.ವೈ.ಎಸ್. ಸ್ವಾಂತನ ವಿಭಾಗ ಎಸ್.ಎಸ್.ಎಫ್. ಹಾಗೂ ವಿಷನ್ ಸ್ಟಿçಂಗ್ ಫೌಂಡೇಶನ್ ಪ್ರಯೋಜಕತ್ವದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಎಮ್ಮೆಮಾಡುವಿನ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ಎಸ್.ಎಫ್., ಎಸ್.ವೈ.ಎಸ್. ಕಚೇರಿಯಲ್ಲಿ ಆಯೋಜಿಸಲಾದ ಶಿಬಿರವನ್ನು ಎಸ್.ವೈ.ಎಸ್. ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಎಮ್ಮೆಮಾಡು ಉದ್ಘಾಟಿಸಿದರು. ಕಾರ್ಯಕ್ರಮದ ಕುರಿತು ಹೃಸ್ವ ವಿಶ್ಲೇಷಣೆ ಹಾಗೂ ಸ್ವಾಗತವನ್ನು ಎಸ್.ಎಸ್.ಎಫ್. ರಾಜ್ಯ ಸಮಿತಿ ನಾಯಕ ಶೌಕತ್ ಎಮ್ಮೆಮಾಡು ನೆರವೇರಿಸಿದರು.
ಶಿಬಿರದಲ್ಲಿ ಎಮ್ಮೆಮಾಡು ವ್ಯಾಪ್ತಿಯ ೧೫೦ಕ್ಕೂ ಅಧಿಕ ಮಂದಿಗೆ ನೇತ್ರ ತಪಾಸಣೆ ನಡೆಸಿ ಕನ್ನಡಕವನ್ನು ವಿತರಿಸಲಾಯಿತು. ಈ ಸಂದರ್ಭ ಎಸ್.ವೈ.ಎಸ್. ಎಮ್ಮೆಮಾಡು ಶಾಖೆಯ ಅಧ್ಯಕ್ಷ ಶಾದುಲಿ ಹಾಜಿ, ಕಾರ್ಯದರ್ಶಿ ನಸೀರ್ ಬಾಖವಿ, ಎಸ್.ಎಸ್.ಎಫ್. ಮಡಿಕೇರಿ ಡಿವಿಷನ್ ಸಮಿತಿ ಸದಸ್ಯರಾದ ಸಯ್ಯದ್ ಝಕರಿಯ ಸಅದಿ, ವಿಷನ್ ಸ್ಟಿçಂಗ್ ಫೌಂಡೇಶನ್ ವ್ಯವಸ್ಥಾಪಕರಾದ ಅಭಿನಾಶ್, ಹಾರಿಸ್ ಝುಹರಿ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.