ಮಡಿಕೇರಿ, ಅ. ೧೯: ಅಮ್ಮತ್ತಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ತಾ. ೨೦ ರಂದು (ಇಂದು) ಬೆಳಿಗ್ಗೆ ೯ ಗಂಟೆಯಿAದ ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಹಾಗೂ ಕಾರ್ಯದರ್ಶಿ ಮೊಳ್ಳೆರ ಮನೋಜ್ ತಿಳಿಸಿದ್ದಾರೆ.

೨೦೨೨ ರಿಂದ ವರ್ಷಂಪ್ರತಿ ಪಂದ್ಯಾವಳಿ ನಡೆಸಿಕೊಂಡು ಬರಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿಯೂ ಅಂದಾಜು ಒಂದು ಸಾವಿರ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ೧೨ ಬೋರ್, ಪಾಯಿಂಟ್ ೨೨ ರೈಫಲ್, ಏರ್‌ರೈಫಲ್ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದ್ದು, ೧೨ ಬೋರ್, ಪಾಯಿಂಟ್ ೨೨ ರೈಫಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ ರೂ. ೩೫ ಸಾವಿರ, ದ್ವಿತೀಯ ರೂ. ೨೫ ಸಾವಿರ, ತೃತೀಯ ರೂ. ೧೫ ಸಾವಿರ, ಏರ್‌ರೈಫಲ್ ವಿಭಾಗದಲ್ಲಿ ಪ್ರಥಮ ರೂ. ೫ ಸಾವಿರ, ದ್ವಿತೀಯ ರೂ. ೩ ಸಾವಿರ ಹಾಗೂ ತೃತೀಯ ರೂ. ೨ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ೨ ಪ್ರತಿಭಾವಂತ ಸ್ಪರ್ಧಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.