ತಹಶೀಲ್ದಾರ್ ಅಸಮಾಧಾನ

ವೀರಾಜಪೇಟೆ, ಅ. ೧೮: ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಯಿಂದ ರಾಷ್ಟಿçÃಯ ಹಬ್ಬಗಳ ಆಚರಣೆ ಕುರಿತು ನಡೆಯುವ ಸಭೆಗಳಿಗೆ ಅಧಿಕಾರಿ ಗಳು ಗೈರಾಗಿ ನಿರ್ಲಕ್ಷö್ಯ ತೋರಿಸು ತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನೋಟಿಸ್ ನೀಡಿ ಜಿಲ್ಲಾಧಿಕಾರಿಗಳ ಮೂಲಕ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ. ಈ ಬಾರಿ ಯಾವುದೇ ಲೋಪ ಇಲ್ಲದೆ ಅರ್ಥಪೂರ್ಣ ರಾಜ್ಯೋತ್ಸವ ಕಾರ್ಯಕ್ರಮ ನಡೆಸುವಂತೆ ಸಭೆ ನಿರ್ಣಯ ಕೈಗೊಂಡಿತು. ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಸರ್ವೆ ಇಲಾಖೆಯ ಎ.ಡಿ.ಎಲ್.ಆರ್. ಸೇರಿದಂತೆ ಕೆಲವು ಅಧಿಕಾರಿಗಳು ಗೈರಾಗಿದ್ದರು. ಈ ಕುರಿತು ತಹಶೀಲ್ದಾರ್ ಆಕ್ಷೇಪ ವ್ಯಕ್ತಪಡಿಸಿ ಇದು ನಮ್ಮ ನೆಲದ ಕನ್ನಡ ಕಾರ್ಯಕ್ರಮ. ಅದನ್ನು ಅರಿತುಕೊಳ್ಳದೆ ನಿರ್ಲಕ್ಷö್ಯ ವಹಿಸಿದರೆ ಕನ್ನಡಕ್ಕೆ ಅಪಮಾನ ಮಾಡಿದಂತಾಗುತ್ತದೆ. ಹಲವಾರು ಇಲಾಖೆಯ ಅಧಿಕಾರಿಗಳು ಸೂಕ್ತ ಸಹಕಾರ ನೀಡುತ್ತಿಲ್ಲ. ಇದರಿಂದ ಕಂದಾಯ ಇಲಾಖೆ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಮಾತ್ರ ಹೊಣೆ ನಿಭಾಯಿಸುವಂತಾಗಿರುವುದು ವಿಪರ್ಯಾಸವಾಗಿದೆ ಎಂದರು.

ಕನ್ನಡ ರಾಜ್ಯೋತ್ಸವ ದಿನ ರಜೆಗಳು ಇರುವುದರಿಂದ ತುರ್ತು ಸಂದರ್ಭ ಹೊರತುಪಡಿಸಿ ಕನ್ನಡ ಕಾರ್ಯಕ್ರಮ ದಲ್ಲಿ ಅಧಿಕಾರಿಗಳು ತಪ್ಪದೆ ಭಾಗವಹಿಸಿ ಸಹಕರಿಸಬೇಕೆಂದು ತಹಶೀಲ್ದಾರ್ ಹೇಳಿದರು. ಉಳಿದಂತೆ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪೂರಕವಾದ ಸ್ಪರ್ಧಾ ಕಾರ್ಯಕ್ರಮ ರೂಪಿಸಿ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಹೆಚ್ಚು ಒತ್ತು ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮಕ್ಕೆ ಶಾಲೆಗೆ ಬರುವ ಮಕ್ಕಳಿಗೆ ಶಾಲಾ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಕಳೆದ ಬಾರಿ ಸ್ವಾತಂತ್ರೊö್ಯÃತ್ಸವದಲ್ಲಿ ಕಾರ್ಯಕ್ರಮ ನಿರೂಪಕರು ಪ್ರಮಾದÀಗಳನ್ನು ಮಾಡಿದ ಬಗ್ಗೆ ಈ ಸಭೆಯಲ್ಲಿ ದೂರುಗಳು ಕೇಳಿಬಂದವು. ಈ ಕುರಿತು ಮಾತನಾಡಿದ ತಹಶೀಲ್ದಾರ್ ಕಳೆದ ಬಾರಿಯ ಪ್ರಮಾದ ನನ್ನ ಗಮನಕ್ಕೆ ಬಂದಿದೆ. ಆದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತರನ್ನು ತಿಳುವಳಿಕೆ ನೀಡಿ ಕಾರ್ಯಕ್ರಮ ನಿರೂಪಿಸುವಂತೆ ನೋಡಿಕೊಳ್ಳುವಂತೆ ಸೂಚಿಸಿದರು. ಡಿ.ವೈ.ಎಸ್.ಪಿ. ಮೋಹನ್ ಕುಮಾರ್ ಕನ್ನಡ ಪುಸ್ತಕ ಮಳಿಗೆಯನ್ನು ಈ ಬಾರಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸುವಂತೆ ಸಭೆಯಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಕೋರಿದರು.

ಇದೇ ಸಂದರ್ಭ ಸರಕಾರದ ಸೂಚನೆಯಂತೆ ಅಂಗಡಿ ಮುಗ್ಗಟ್ಟುಗಳಲ್ಲಿ ಶೇ. ೬೦ ರ ಕನ್ನಡ ನಾಪಫಲಕ ಅಳವಡಿಕೆ ಬಗ್ಗೆ ಕಾರ್ಯ ಪ್ರವೃತವಾಗಬೇಕು ಎಂದು ತಹಶೀಲ್ದಾರ್ ನಿರ್ದೇಶಿಸಿದರು. ಕನ್ನಡದಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕನ್ನಡ ಭಾಷೆಯ ಸಾಧಕರಿಗೆ ಸನ್ಮಾನ ಕುರಿತ ಅನಿಸಿಕೆಗೆ ತಹಶೀಲ್ದಾರ್ ಸಮ್ಮತಿಸಿ ಅರ್ಹರನ್ನು ಗುರುತಿಸಿ ಸಹಕರಿಸಿ ಎಂದರು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ, ಸರಕಾರಿ ಅಭಿಯೋಜಕ ನರೇಂದ್ರ ಕಾಮತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.