ನಾಪೋಕ್ಲು, ಅ. ೧೮: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವದ ಎರಡನೇ ದಿನ ಇತಿಹಾಸ ಪ್ರಸಿದ್ಧ ಬಲಮುರಿ ಅಗಸ್ತೆö್ಯÃಶ್ವರ ಹಾಗೂ ಶ್ರೀ ಕಣ್ವ ಮುನೀಶ್ವರ ದೇವಳಗಳಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯಿತು.

ಕಾವೇರಿ ನದಿ ತೀರದ ಎಡಭಾಗದಲ್ಲಿರುವ ಶ್ರೀ ಕಣ್ವ ಮುನೀಶ್ವರ ದೇವಳದಲ್ಲಿ ಬೆಳಿಗ್ಗೆಯಿಂದ ರುದ್ರಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು. ನಂತರ ಅಗಸ್ತೆö್ಯÃಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಗಸ್ತೆö್ಯÃಶ್ವರ ದೇವಳದಲ್ಲಿ ಬೆಳಿಗ್ಗೆ ೫ ಗಂಟೆಯಿAದಲೇ ಕೇಶಮುಂಡನ ಸೇವೆ, ಪಿಂಡ ಪ್ರದಾನ ಆರಂಭಗೊAಡಿತು.

ನಂತರ ದೇವಳದ ವತಿಯಿಂದ ಕಾವೇರಿ ನದಿ ತೀರದಲ್ಲಿ ಗಂಗಾ ಪೂಜೆ ಹಾಗೂ ಶ್ರೀ ಕಾವೇರಿ ಮಾತೆಗೆ ಮಹಾ ಆರತಿ ನೆರವೇರಿಸಲಾಯಿತು. ಬಳಿಕ ದೇವಳದಲ್ಲಿ ಮಹಾಪೂಜೆ ಮಹಾಆರತಿ ನೆರವೇರಿಸಲಾಯಿತು. ಬಳಿಕ ದೇವಳದಲ್ಲಿ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಳಕ್ಕೆ ಭೇಟಿ ನೀಡಿದರು. ಅಂಗಡಿ ವ್ಯಾಪಾರಿಗಳ ಭರಾಟೆ ಜೋರಾಗಿತ್ತು.

ಈ ಸಂದರ್ಭದಲ್ಲಿ ಅಗಸ್ತೆö್ಯÃಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ ಕೂಂಗೀರAಡ ಸಾಧು ತಮ್ಮಯ್ಯ,ಅನ್ನದಾನ ಸಮಿತಿ ಅಧ್ಯಕ್ಷ ಬೊಳ್ಳಚೆಟ್ಟಿರ ಚೆಟ್ಟಿಚ್ಚ ,ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಪೊನ್ನಚನ ಜಯ, ಸದಸ್ಯರು ಹಾಗೂ ತಕ್ಕಮುಖ್ಯಸ್ಥರು ಹಾಜರಿದ್ದರು. ಪೂಜಾ ವಿಧಿ ವಿಧಾನಗಳ ನೇತೃತ್ಪವನ್ನು ಮಹಾಬಲೇಶ್ವರ ಭಟ್ ಹಾಗೂ ಕಲ್ಲೂರಾಯ ಮತ್ತು ತಂಡದವರು ನೆರವೇರಿಸಿದರು. ಬಲಮುರಿ, ಮೂರ್ನಾಡು, ಪಾರಾಣೆ, ಕೈಕಾಡು, ಬೇತ್ರಿ, ಹೊದ್ದೂರು,ಅನ್ನದಾನ ಸಮಿತಿ ಅಧ್ಯಕ್ಷ ಬೊಳ್ಳಚೆಟ್ಟಿರ ಚೆಟ್ಟಿಚ್ಚ ,ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಪೊನ್ನಚನ ಜಯ, ಸದಸ್ಯರು ಹಾಗೂ ತಕ್ಕಮುಖ್ಯಸ್ಥರು ಹಾಜರಿದ್ದರು. ಪೂಜಾ ವಿಧಿ ವಿಧಾನಗಳ ನೇತೃತ್ಪವನ್ನು ಮಹಾಬಲೇಶ್ವರ ಭಟ್ ಹಾಗೂ ಕಲ್ಲೂರಾಯ ಮತ್ತು ತಂಡದವರು ನೆರವೇರಿಸಿದರು. ಬಲಮುರಿ, ಮೂರ್ನಾಡು, ಪಾರಾಣೆ, ಕೈಕಾಡು, ಬೇತ್ರಿ, ಹೊದ್ದೂರು,

(ಮೊದಲ ಪುಟದಿಂದ) ನಾಪೋಕ್ಲು, ಕೊಂಡAಗೇರಿ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡುವದು. ಕಾವೇರಿ ನದಿ ತೀರದಲ್ಲಿ ಕೇಶ ಮುಂಡನ, ಪೂರ್ವಿಕರಿಗೆ ಪಿಂಡ ಪ್ರಧಾನ ಮಾಡುವ ಪದ್ಧತಿ ಹಿಂದಿನಿAದ ನಡೆದುಕೊಂಡು ಬಂದಿದೆ.

ಸರಕಾರಿ ಅನುದಾನಕ್ಕೆ ಆಗ್ರಹ

ತಲಕಾವೇರಿಯಲ್ಲಿ ತೀರ್ಥೋದ್ಭವದ ೨ನೇ ದಿನ ಬಲಮುರಿಯ ಅಗಸ್ತ್ಯೇಶ್ವರ ಮತ್ತು ಕಣ್ವ ಮುನೀಶ್ವರ ಕ್ಷೇತ್ರಗಳಲ್ಲಿ ಜಾತ್ರೆ ನಡೆಯುತ್ತದೆ. ತಲಕಾವೇರಿ ಕ್ಷೇತ್ರದಂತೆ ಇಲ್ಲಿಗೂ ವಿಶೇಷ ಸ್ಥಾನವಿದೆ. ಕೆಳಮುಖವಾಗಿ ಹರಿಯುವ ಕಾವೇರಿ ಮಾತೆ ಕ್ಷೇತ್ರದಲ್ಲಿ ಮೇಲ್ಮುಖವಾಗಿ ಹರಿದು ನಂತರ ಕೆಳಮುಖವಾಗಿ ಹರಿದು ಬಲಮುರಿ ಎಂದು ಹೆಸರು

ಬರಲು ಕಾರಣವಾಗಿದ್ದಾಳೆ. ಭಾಗಮಂಡಲದಲ್ಲಿ ಪಿತೃಪಿಂಡ ನೆರವೇರಿಸಲು ಸಾಧ್ಯವಾಗದ ಭಕ್ತರು ಇಲ್ಲಿ ಪಿಂಡಪ್ರದಾನ ಮಾಡುವ ಮೂಲಕ ಪುನೀತರಾಗುತ್ತಾರೆ. ಆದರೆ, ಈ ಕ್ಷೇತ್ರವನ್ನು ಸರಕಾರ ಕಡೆಗಣಿಸುತ್ತಿದೆ. ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಭಕ್ತಾದಿಗಳು ಆಗ್ರಹಿಸಿದ್ದಾರೆ. - ಪಿ.ವಿ.ಪ್ರಭಾಕರ್