ಸಿದ್ದಾಪುರ, ಅ. ೧೮: ಅಮ್ಮತ್ತಿಯ ಶ್ರೀ ಚಾಮುಂಡೇಶ್ವರಿ ಹಾಗೂ ಪಾಷಾಣ ಮೂರ್ತಿ ದೇವಾಲಯದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ದೇವಾಲಯದ ವತಿಯಿಂದ ೯ ದಿನಗಳ ಕಾಲ ವಿಶೇಷ ಪೂಜೆಗಳ ಕಾರ್ಯಗಳು ನಡೆದವು. ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ದೇವಾಲಯದಲ್ಲಿ ಚಂಡಿಕಾಯಾಗ ಹೋಮ ನಡೆಸಲಾಯಿತು. ಪೂಜಾ ಕಾರ್ಯಕ್ರಮಗಳನ್ನು ಗುರೂಜಿ ಗುರುರಾಜ್ ಭಟ್ ನೆರವೇರಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಚಾಮುಂಡೇಶ್ವರಿ ಪಾಷಾಣ ಮೂರ್ತಿ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರಾದ ಕುಟ್ಟಂಡ ಸರಸ್ವತಿ, ಲೋಕೇಶ್, ಮುತ್ತಪ್ಪ ಇನ್ನಿತರರು ಹಾಜರಿದ್ದರು.