ಸೋಮವಾರಪೇಟೆ, ಅ. ೧೮: ಸಮೀಪದ ಕಿಬ್ಬೆಟ್ಟ ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ೯ ದಿನಗಳ ಕಾಲ ಪೂಜಿಸಿದ್ದ ಉತ್ಸವ ಮೂರ್ತಿಯನ್ನು ಹಾರಂಗಿ ನದಿಯಲ್ಲಿ ಶಾಸ್ತೊçÃಕ್ತವಾಗಿ ವಿಸರ್ಜಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಮನೋಜ್ ಭಟ್ ಅವರ ಪೌರೋಹಿತ್ವದಲ್ಲಿ ನವದುರ್ಗಾ ಮಾತೆಗೆ ೯ ದಿನಗಳ ಕಾಲ ವಿವಿಧ ಅಲಂಕಾರದೊAದಿಗೆ, ವಿಶೇಷ ಪೂಜೆ, ಹೋಮ ನಡೆಯಿತು. ವಿಸರ್ಜನೋತ್ಸವ ಸಂದರ್ಭ ಪ್ರಮುಖರಾದ ಮಧು, ಗಣಪತಿ, ರವಿ, ಕುಶಾಲಪ್ಪ, ಮುರುಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.