ಮಡಿಕೇರಿ, ಅ. ೧೮: ಕಳೆದ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ೧೪ ವರ್ಷದ ಒಳಗಿನ ಕರಾಟೆ ಚಾಂಪಿಯನ್‌ನಲ್ಲಿ ಚಿನ್ನದ ಪದಕ ಹಾಗೂ ನಂತರ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದ ರಾಷ್ಟಿçÃಯ ೧೪ ವರ್ಷದ ಒಳಗಿನ ಸಿಐಎಸ್‌ಇ ರಾಷ್ಟಿçÃಯ ಕ್ರೀಡಾ ೨೦೨೪ ಬಾಲಕರ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಗೋಣಿಕೊಪ್ಪಲಿನ ವಾಸುದೇವ ರಾಜಿತ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರು ಗೋಣಿಕೊಪ್ಪಲು ಕೆ.ವೈ. ರಾಜಿತ್-ದಿವ್ಯಾ ದಂಪತಿಯ ಪುತ್ರ ಹಾಗೂ ಗೋಣಿಕೊಪ್ಪಲು ಕಾಪ್ಸ್ ಶಾಲೆಯ ವಿದ್ಯಾರ್ಥಿ.