ವೀರಾಜಪೇಟೆ, ಅ. ೮: ವೀರಾಜಪೇಟೆ ಪುರಸಭೆ ವತಿಯಿಂದ ಮಟನ್ ಮಾರ್ಕೆಟ್ ಬಳಿ ಸೀಮೆಂಟ್ ಹಾಕಿ ನಿರ್ಮಾಣ ಮಾಡಲಾಗಿದ್ದ ಚರಂಡಿ ತೆರವುಗೊಳಿಸಲಾಯಿತು.
ವೀರಾಜಪೇಟೆಯಲ್ಲಿ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಮಾಂಸ ಮಾರುಕಟ್ಟೆ ಜಂಕ್ಷನ್‌ನಲ್ಲಿ ಈ ವರ್ಷವು ರಸ್ತೆಯಲ್ಲಿ ನೀರು ತುಂಬಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿತ್ತು. ಅದೇ ರೀತಿ ಶನಿವಾರ ಮಧ್ಯಾಹ್ನ ಹತ್ತು ನಿಮಿಷ ಸುರಿದ ಮಳೆಗೆ ಮಾಂಸ ಮಾರುಕಟ್ಟೆ ಜಂಕ್ಷನ್‌ನಲ್ಲಿ ಮತ್ತೆ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಚಂದ್ರ ಕುಮಾರ್ ಚರಂಡಿಯನ್ನು ಕಲ್ಲು ಸಿಮೆಂಟ್‌ನಿAದ ಮುಚ್ಚಿರುವುದನ್ನು ಗಮನಿಸಿದರು. ಇದನ್ನು ಅರಿತು ಭಾನುವಾರ ಬೆಳಿಗ್ಗೆ ಪುರಸಭೆಯ ಸಿಬ್ಬಂದಿಗಳಿAದ ಕಲ್ಲು ಸಿಮೆಂಟ್‌ನಿAದ ತುಂಬಿದ ಚರಂಡಿಯನ್ನು ತೆರುವುಗೊಳಿಸಿ ಸುಗಮವಾಗಿ ನೀರು ಹರಿಯುವಂತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮತಿನ್, ರಾಜೇಶ್ ಪದ್ಮನಾಭ, ಪುರಸಭೆಯ ಆರೋಗ್ಯ ನಿರೀಕ್ಷಕರಾದ ಕೋಮಲ, ಸಿಬ್ಬಂದಿ ಮುರಳಿ ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.