ಮಡಿಕೇರಿ, ಅ. ೫: ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿAದ ೩೧ನೆ ವರ್ಷದ ಅದ್ದೂರಿ ಆಯುಧ ಪೂಜಾ ಸಮಾರಂಭ ತಾ.೧೧ ರಂದು ನಡೆಯಲಿದೆ. ಅಂದು ಮಧ್ಯಾಹ್ನ ೨ ಗಂಟೆಗೆ ಅಲಂಕೃತ ವಾಹನಗಳಿಗೆ ಪೂಜೆ, ೩ ಗಂಟೆಗೆ ಅಲಂಕೃತ ವಾಹನಗಳ ಮೆರವಣಿಗೆ ಮೂರ್ನಾಡು ಪಾಂಡಾಣೆ ಮೈದಾನದಿಂದ ನಡೆಯಲಿದೆ. ರಸಿಕ್ ಆರ್ಟ್ಸ್ ಬೊಂಬೆ ಬಳಗದ ವತಿಯಿಂದ ವಾದ್ಯಗೋಷ್ಠಿ ನಡೆಯಲಿದೆ. ಸಂಜೆ ೭ ಗಂಟೆಗೆ ಪಾಂಡಾಣೆ ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಲಂಕೃತ ವಾಹನಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ರಾತ್ರಿ ೮ ಗಂಟೆಗೆ ಭದ್ರಾವತಿ ಬ್ರದರ್ಸ್ ತಂಡದಿAದ ರಸಮಂಜರಿ ನಡೆಯಲಿದೆ.