ಗೋಣಿಕೊಪ್ಪಲು, ಅ. ೫:ಶ್ರೀ ಕಾವೇರಿ ದಸರಾ ಸಮಿತಿಯ ೪೬ನೇ ವರ್ಷದ ದಸರಾ ಜನೋತ್ಸವದ ೨ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ನಂದಾ ಗೋಕುಲ ತಂಡ ಹಾಗೂ ಮೈಸೂರಿನ ಯೂನಿಕ್ ಸಿಜರ‍್ಸ್ ಅಕಾಡೆಮಿ ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವು ಉತ್ತಮವಾಗಿ ಮೂಡಿ ಬಂದವು.

ಬಿಗ್‌ಬಾಸ್ ಖ್ಯಾತಿಯ ಶೋಭ ರಾಜ್‌ಕುಮಾರ್ ಅವರು ಮಾತನಾಡುವ ಬೊಂಬೆ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ವೀರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆಯು ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಬಸವರಾಜ್ ಬಳ್ಳಾರಿ ಇವರ ಕುಚುಪುಡಿ ನೃತ್ಯ ಪ್ರದರ್ಶನ ಗಮನ ಸೆಳೆಯಿತು.