ಕೂಡಿಗೆ, ಅ. ೫ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಬೆಳೆ ನಷ್ಟ ಸಂಭವಿಸಿದೆ. ಜಮೀನಿಗೆ ದಾಳಿ ಮಾಡಿ ಹಾರಂಗಿ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಲಾಗಿರುವ ಭತ್ತ ಗದ್ದೆಗಳ ಬೆಳೆಯನ್ನು ತಿಂದು ತುಳಿದು ಬಾರಿ ನಷ್ಟಪಡಿಸಿವೆ. ಅಲ್ಲದೆ ಯಡನವಾಡು ಮೀಸಲು ಅರಣ್ಯ ಪ್ರದೇಶಗಳ ಕಡೆಯಿಂದಲೂ ಸಹ ಕಾಡಾನೆಗಳ ಹಿಂಡು ಗದ್ದೆಗಳ ಬೆಳೆಯನ್ನು ನಾಶಪಡಿಸಿವೆ.
ಹುದುಗೂರು, ಗ್ರಾಮದ ರಮೇಶ್, ಭರತ್, ಮಂಜುನಾಥ, ಚೆಂಗಪ್ಪ ಅವರ ಜಮೀನಿಗೆ ಕಾಡಾನೆಗಳು ದಾಳಿ ಮಾಡಿದ ಪರಿಣಾಮವಾಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ.