ಮಡಿಕೇರಿ, ಅ. ೫: ಫೋರ್ಟಿಸ್ ಆಸ್ಪತ್ರೆಯ ಡಾ. ಯೋಗೇಶ್ ಅವರಿಂದ ಇಂದು (ತಾ. ೬ ರಂದು) ಉಚಿತ ಮೂಳೆ ಚಿಕಿತ್ಸಾ (ಆರ್ಥೊಪೆಡಿಕ್) ತಪಾಸಣಾ ಶಿಬಿರ ಮಡಿಕೇರಿಯ ವೆಬ್ಸ್ ರಸ್ತೆಯಲ್ಲಿರುವ ಹರ್ಷ ಹೆಲ್ತ್ಕೇರ್ ಕ್ಲಿನಿಕ್ನಲ್ಲಿ ಬೆ.೧೦:೩೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಆಯೋಜಿಸಲಾಗಿದೆ. ಮಧ್ಯಾಹ್ನ ೧:೩೦ ರಿಂದ ೪ ಗಂಟೆಯವರೆಗೆ ಕುಶಾಲನಗರದ ಬಿ.ಎಂ ರಸ್ತೆಯಲ್ಲಿನ ಬಾಲಾಜಿ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ.