ಭಾಗಮಂಡಲ, ಅ. ೪: ಅಕ್ಟೋಬರ್ ೬ರಿಂದ ೧೧ರವರೆಗೆ ಯುರೋಪಿನ ಕ್ರೋವೇಶಿಯದಲ್ಲಿ ಆಯೋಜಿಸಲಾಗಿರುವ ಎಂಎಐ ಅಂಡರ್ ೨೦ ಮಿನಿ ಫುಟ್ಬಾಲ್ ನ್ಯಾಷನಲ್ ಚಾಂಪಿಯನ್ ಶಿಪ್ ೨೦೨೪ಕ್ಕೆ ಬಲ್ಲಮಾವಟಿ ಗ್ರಾಮದ ಎಡಿಕೇರಿ ವೇದಾಂತ್ ಜಗನ್ನಾಥ್ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಯುಎಇನಲ್ಲಿ ನಡೆದ ಮಿನಿ ಫುಟ್ಬಾಲ್ ನ್ಯಾಷನಲ್ ಚಾಂಪಿಯನ್ ಶಿಪ್ ೨೦೨೩ ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇವರು ಬೆಂಗಳೂರಿನ ಟಿ. ಜಾನ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಬಲ್ಲಮಾವಟಿ ಗ್ರಾಮದ ಎಡಿಕೇರಿ ಜಗನ್ನಾಥ್ ಮತ್ತು ವಸಂತಿ ದಂಪತಿ ಪುತ್ರ.