x
*ಗೋಣಿಕೊಪ್ಪ, ಅ. ೪: ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಯನ್ನು ಆಚರಿಸಲಾಯಿತು. ಅತ್ತೂರು ಉಪ ಕೇಂದ್ರದ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ, ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಪೌಷ್ಟಿಕ ಆಹಾರ, ಚುಚ್ಚುಮದ್ದು, ಮಕ್ಕಳ ಆರೈಕೆ, ಆರೋಗ್ಯ ತಪಾಸಣೆ, ಗ್ರಾಮ ನೈರ್ಮಲ್ಯಗಳ ಬಗ್ಗೆ ತಿಳಿಸ ಲಾಯಿತು. ನಂತರ ೧೫ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅಕ್ಷರ ಅಭ್ಯಾಸ, ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರುಗಳಾದ ಅಫ್ಸಲ್, ಸಪೂರ ಬಾನು, ಆರೋಗ್ಯ ಅಧಿಕಾರಿ ಶಿವಯ್ಯ, ಪೃಥ್ವಿ, ಶಿವಮ್ಮ, ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂಣಚ್ಚ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೀತ ಪೋಷಣ್, ಅಭಿಯಾನ್ ಕೋ ಆರ್ಡಿನೇಟರ್ ತಕ್ಷ ತಂಗಮ್ಮ, ಅಂಗನವಾಡಿ ಕಾರ್ಯ ಕರ್ತೆಯರು ಆಶಾ ಕಾರ್ಯಕರ್ತರು, ಗರ್ಭಿಣಿಯರು ಬಾಣಂತಿಯರು ಮಕ್ಕಳ ಪೋಷಕರು ಊರಿನ ಗ್ರಾಮಸ್ಥರು ಹಾಜರಿದ್ದರು.