ಸುಂಟಿಕೊಪ್ಪ, ಅ. ೪: ವರ್ಷಂಪ್ರತಿಯAತೆ ಈ ವರ್ಷವು ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
ಮುಂದಿನ ಶುಕ್ರವಾರದವರೆಗೆ ವಿಶೇಷ ಪೂಜೆಗಳು ನಡೆಯಲಿದ್ದು, ಶ್ರೀರಂಗಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಕುಂಕುಮಾರ್ಚನೆ, ಶ್ರೀ ಸೂಕ್ತಾಭಿಷೇಕ ಮತ್ತು ಪುಷ್ಪಾರ್ಚನೆಗಳು ನಡೆಯಲಿವೆ. ಪಂಚಾಮೃತ ಅಭಿಷೇಕವು ಬೆಳಗ್ಗಿನ ಹೊತ್ತು ನಡೆಯಲ್ಲಿದ್ದು, ಸೇವಾ ಸಂಕಲ್ಪವು ಸಂಜೆ ೬ ರಿಂದ ಪ್ರಾರಂಭಗೊಳ್ಳಲಿದ್ದು, ಭಕ್ತಾದಿಗಳು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಕೋರಿದೆ.