ಶ್ರೀಮಂಗಲ, ಅ. ೪: ಮಲ್ಲಮಾಡ ಕುಟುಂಬದ ಆಶ್ರಯದಲ್ಲಿ ಬೆಕ್ಕೆಸೊಡ್ಲೂರು ಗ್ರಾಮದ ಶಾರದ ಪ್ರೌಢಶಾಲಾ ಮೈದಾನದಲ್ಲಿ ಅಕ್ಟೋಬರ್ ೧೨ ಮತ್ತು ೧೩ ರಂದು ಆಯೋಜಿಸಿರುವ ಕೊಡವ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯ ಟೈಸ್ ಕಾರ್ಡನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ಪ್ರಪ್ರಥಮ ಬಾರಿಗೆ ಕೊಡವ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿ ಸುತ್ತಿರುವ ಈ ಪಂದ್ಯಾವಳಿಯಲ್ಲಿ ೫೬ ಕುಟುಂಬಗಳು ಭಾಗವಹಿಸಲಿದೆ.

ಈ ಸಂದರ್ಭ ಕುಟುಂಬದ ಅಧ್ಯಕ್ಷ ಪ್ರಭು ಪೂಣಚ್ಚ, ಕಾರ್ಯದರ್ಶಿ ಈಶ್ವರ, ಗಿರೀಶ್, ನರಚಂದ್ರ, ಸುಧಿ, ಸಂತೋಷ್, ವಿಷ್ಣು, ಜೋಯಪ್ಪ, ಜಯ, ಕಿರು, ದೈಹಿಕ ಶಿಕ್ಷಕ ಸುಬ್ಬಯ್ಯ ಹಾಜರಿದ್ದರು.