ಸೋಮವಾರಪೇಟೆ, ಅ. ೩: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಾ. ೧೮ ರಂದು ಸೋಮವಾರಪೇಟೆ ಪಟ್ಟಣದಲ್ಲಿ ಶ್ರೀ ತಲಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೦ ವರ್ಷಗಳಿಂದ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತೀರ್ಥ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ತಾ. ೧೭ ರಂದು ಬೆಳಿಗ್ಗೆ ತಲಕಾವೇರಿಯಲ್ಲಿ ತೀರ್ಥೋದ್ಭವದ ನಂತರ ಪಟ್ಟಣಕ್ಕೆ ತೀರ್ಥವನ್ನು ತರಲಾಗುವುದು ಎಂದರು.
ತಾ. ೧೮ರಂದು ಬೆಳಿಗ್ಗೆ ೯.೩೦ಕ್ಕೆ ಇಲ್ಲಿನ ಕಾವೇರಿ ಪ್ರತಿಮೆಗೆ ಹರಪಳ್ಳಿ ರವೀಂದ್ರ ಅವರು ಪೂಜೆ ಸಲ್ಲಿಸಲಿದ್ದು, ನಂತರ ಜೇಸಿ ವೇದಿಕೆಯಲ್ಲಿ ೧೧ ಗಂಟೆಯಿAದ ಸಾರ್ವಜನಿಕರಿಗೆ ತೀರ್ಥ ಮತ್ತು ಪ್ರಸಾದ ವಿತರಿಸಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಬಿ. ಬಸವರಾಜು, ಕಾರ್ಯದರ್ಶಿ ಬಿ. ರಾಜಪ್ಪ, ಸಹ ಕಾರ್ಯದರ್ಶಿ ಗಿರೀಶ್ ಹಾಗೂ ಸದಸ್ಯ ನರಸಿಂಹ ಇದ್ದರು.