ಸೋಮವಾರಪೇಟೆ, ಅ. ೩: ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ತಾ. ೪ರಂದು (ಇಂದು) ತಾಲೂಕು ಘಟಕದ ಉದ್ಘಾಟನೆ ಹಾಗೂ ಶರದೃವಿನ ಐಸಿರಿ ಕವಿಗೋಷ್ಠಿ ಮತ್ತು ಸಮೂಹ ಜಾನಪದ ನೃತ್ಯ ಕಾರ್ಯಕ್ರಮ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ ೧೧ಕ್ಕೆ ಕಾರ್ಯಕ್ರಮವನ್ನು ಸ್ಥಳೀಯ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡಸಿರಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಲಿದ್ದಾರೆ.

ಮುಖ್ಯ ಭಾಷಣವನ್ನು ಕುಶಾಲನಗರದ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಮಾಡಲಿದ್ದಾರೆ. ್ಲ ಪಟ್ಟಣ ಪಂಚಾಯಿತಿ ಸದಸ್ಯ ಬಿ. ಸಂಜೀವ, ಉದ್ಯಮಿ ಎಂ.ವಿ. ಅರುಣ್ ಕೊತ್ನಳ್ಳಿ, ವಿದ್ಯಾ ನರ್ಸಿಂಗ್ ಹೋಮ್ ವ್ಯವಸ್ಥಾಪಕ ಸುಲೈಮಾನ್, ಮಹಿಳಾ ಸಮಾಜದ ಅಧ್ಯಕ್ಷ ಸುಮಾ ಸುದೀಪ್, ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಜವರಪ್ಪ, ನ.ಲ. ವಿಜಯ ಉಪಸ್ಥಿತರಿರುವರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಕಾಜೂರು ಸತೀಶ್ ವಹಿಸಲಿದ್ದಾರೆ ಎಂದು ಸಮಿತಿಯ ಪದಾಧಿಕಾರಿ ಪ್ರೇಮ ತಿಳಿಸಿದ್ದಾರೆ.