ಮಡಿಕೇರಿ, ಅ. ೨: ಮೂರ್ನಾಡು ಪ್ರೌಢ ಶಾಲೆಯಲ್ಲಿ ನಡೆದ ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಪಿ.ಯು. ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿ ಸಾಧನೆಗೈದಿದ್ದಾರೆ.
೧ ರಿಂದ ೪ನೇ ತರಗತಿ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಉಮೈಝ್ ಪ್ರಥಮ, ಚಿತ್ರಕಲೆ ಸ್ಪರ್ಧೆಯಲ್ಲಿ ಲಾಜಿಯಾ ಫಾತಿಮಾ ಪ್ರಥಮ, ಆಶುಭಾಷಣದಲ್ಲಿ ಜಿಯಾನ ಜಿ.ಯು ತೃತೀಯ, ಛದ್ಮವೇಷದಲ್ಲಿ ರಾಹಿದ್ ಎಂ.ಎನ್ ತೃತೀಯ, ಹಿಂದಿ ಕಂಠಪಾಠದಲ್ಲಿ ಸಫ್ವಾನ್ ಎ.ಆರ್. ತೃತೀಯ ಸ್ಥಾನಗಳಿಸಿದ್ದಾರೆ.
೫ ರಿಂದ ೭ನೇ ತರಗತಿ ವಿಭಾಗದಲ್ಲಿ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಹೈಝ್ ಸಿ.ಹೆಚ್. ಪ್ರಥಮ, ಭಕ್ತಿಗೀತೆಯಲ್ಲಿ ಫಾತಿಮತ್ ವಫಾ ಪ್ರಥಮ, ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ನಿಸಾಜ್ ತೃತೀಯ ಸ್ಥಾನಗಳಿಸಿದ್ದಾರೆ.
೮ನೇ ತರಗತಿಯಿಂದ ೧೨ನೇ ತರಗತಿ ವಿಭಾಗದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಫಜೀಲ ಪಿ.ಎಂ. ತೃತೀಯ, ಹಿಂದಿ ಭಾಷಣದಲ್ಲಿ ಫೈಜಾ ಕೆ.ಆರ್. ತೃತೀಯ, ಆಶು ಭಾಷಣದಲ್ಲಿ ಅಸ್ಮತ್ ರುಮಾನ ತೃತೀಯ, ಕನ್ನಡ ಪ್ರಬಂಧದಲ್ಲಿ ಸಲ್ಮಾನ್ ಫಾರಿಸ್ ದ್ವಿತೀಯ, ಗಜಲ್ ಸ್ಪರ್ಧೆಯಲ್ಲಿ ಸಲ್ಮಾನ್ ಫಾರಿಸ್ ಪ್ರಥಮ ಸ್ಥಾನಗಳಿಸಿದ್ದಾರೆ. ಕವಾಲಿ ಸ್ಪರ್ಧೆಯಲ್ಲಿ ಉನೈಸ್ ನೇತೃತ್ವದ ರಾಝಿಕ್ ಎ.ಸೆಡ್, ಬಿಲಾಲ್ ಹೆಚ್.ಎ., ಬಿಲಾಲ್ ಆರ್.ಜೆ., ಮಹ್ರೂಫ್ ಪಿ.ಯು ಮತ್ತು ಸಲ್ಮಾನ್ ಫಾರಿಸ್ ಯು.ಕೆ ತಂಡವು ದ್ವಿತೀಯ ಸ್ಥಾನಗಳಿಸಿದ್ದಾರೆ.