ಶ್ರೀಮಂಗಲ, ಅ. ೨: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೯೪.೮೪ ಕೋಟಿ ವಹಿವಾಟು ನಡೆಸಿ ರೂ. ೧೪ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದಲ್ಲಿ ೧,೫೪೪ ಸದಸ್ಯರು ಇದ್ದು ಒಟ್ಟು ಶೇರು ರೂ. ೧೪.೨೬ ಲಕ್ಷವಿದೆ. ಪ್ರಸಕ್ತ ಸಾಲಿನಲ್ಲಿ ರೂ. ೧೪ ಕೋಟಿ ಸಾಲ ವಿತರಣೆ ಮಾಡಲಾಗಿದೆ.

ಸಂಘದ ವ್ಯಾಪಾರ ಆದಾಯ ರೂ. ೧೦.೭೭ ಲಕ್ಷ ಎಂದು ತಿಳಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಕೆ. ಸುಬ್ರಮಣಿ, ಆಡಳಿತ ಮಂಡಳಿ ಸದಸ್ಯರಾದ ಕೆ.ಎಂ. ಸುನಿಲ್, ಬಿ.ಕೆ. ನಾಣಯ್ಯ, ಎಂ.ಬಿ. ಮಂಜುನಾಥ, ಬಿ.ಎಂ. ಸಂಪತ್, ಕೆ.ಬಿ. ಕುಶಾಲಪ್ಪ, ಕೆ.ಎಂ. ಮೇದಪ್ಪ, ಎ.ಎನ್. ಗಣೇಶ್, ಕೆ.ಆರ್. ಮಧುರ, ಕೆ.ಡಿ. ನಂಜಮ್ಮ, ಹೆಚ್.ಎ. ಶಾರದಾ, ಪಿ.ಬಿ. ಚೋಟು ಹಾಜರಿದ್ದರು.