ಮಡಿಕೇರಿ, ಅ. ೧: ನಗರದ ಮಲ್ಲಿಕಾರ್ಜುನ ನಗರದಲ್ಲಿನ ಶ್ರೀ ಕೋದಂಡರಾಮ ದೇವಾಲಯವು ತನ್ನ ೫೦ನೆ ವರ್ಷದ ದಸರಾ ಉತ್ಸವವನ್ನು ಈ ಬಾರಿ ಆಚರಿಸುತ್ತಿದ್ದು, ನವರಾತ್ರಿಯ ಎಲ್ಲ ದಿನಗಳು ವಿಶೇಷ ಪೂಜೆ ನಂತರ ರಾತ್ರಿ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ತಾ.೩ ರಂದು ೪ ಶಕ್ತಿ ದೇವತೆಗಳ ಕರಗವು ದೇವಾಲಯಕ್ಕೆ ಸಂಜೆ ೭ ಗಂಟೆಯ ಬಳಿಕ ಆಗಮಿಸಲಿದೆ. ಈ ಸಂದರ್ಭ ವಿಶೇಷ ಪೂಜೆಯೊಂದಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ನವರಾತ್ರಿಯ ಎಲ್ಲ ದಿನಗಳು ವಿವಿಧ ಪೂಜೆಗಳು ನಡೆದು ನಂತರ ಅನ್ನದಾನದ ವ್ಯವಸ್ಥೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.